ಬಳ್ಳಾರಿ : ಒಂದು ಕಾಲದಲ್ಲಿ ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತ ಮಾಡ್ಬೇಕು ಅನ್ನೋದು ಬಳ್ಳಾರಿಯಲ್ಲಿ ಡಿಸೈಡ್ ಆಗ್ತಿತ್ತು.
ಇಲ್ಲಿನ ಘಟಾನುಘಟಿ ನಾಯಕರು ಜೈಲುಪಾಲಾದ ಬಳಿಕ ಬಳ್ಳಾರಿ ರಾಜಕೀಯ ನೆಲೆ ಕಳೆದುಕೊಂಡಿತ್ತು. ಆದ್ರೀಗ ರೆಡ್ಡಿ ಕಮ್ಬ್ಯಾಕ್ ಮಾಡಿದ್ದು, ಬಳ್ಳಾರಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ್ಲೇ ಬಳ್ಳಾರಿಯಲ್ಲಿ ಸ್ಪರ್ಧೆ ಮಾಡಲು ರಾಮುಲು ಸರ್ಕಸ್ ಮಾಡ್ತಿದ್ದಾರೆ. ಜನಾರ್ದನ ರೆಡ್ಡಿ ಕೂಡ ಕಮ್ಬ್ಯಾಕ್ ಮಾಡ್ತಿರೋದು ಬಿಜೆಪಿ ಬಲ ಹೆಚ್ಚಿಸಿದೆ.
ಒಂದು ವೇಳೆ ರೆಡ್ಡಿ ರಾಜಕೀಯದಿಂದ ದೂರವುಳಿದ್ರೆ ಶ್ರೀರಾಮುಲು ಏಕಾಂಗಿ ಹೋರಾಟ ಮಾಡಲೇಬೇಕಾದ ಪರಿಸ್ಥಿತಿ ಎದುರಾಗಲಿದೆ. ರೆಡ್ಡಿ ಬಳಗವನ್ನು ಕಟ್ಟಿ ಹಾಕಲು ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ರೆಡ್ಡಿ ಬಳಗ ರೆಡಿಯಾಗಿದೆ.
ಒಟ್ಟಿನಲ್ಲಿ ರೆಡ್ಡಿ ರಾಜಕೀಯ ಮರುಪ್ರವೇಶದ ಮೇಲೆ ಬಳ್ಳಾರಿ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಒಂದು ವೇಳೆ ರೆಡ್ಡಿ ರಾಜಕೀಯ ಪ್ರವೇಶಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದ್ರೆ, ಶ್ರೀರಾಮುಲು ಏಕಾಂಗಿ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.