ಪ್ರಾದೇಶಿಕ ಪಕ್ಷಕ್ಕೆ ಮಹತ್ವವಿದೆ - ಕೃಷ್ಣ ಬೈರೇಗೌಡ

ಬುಧವಾರ, 30 ಮಾರ್ಚ್ 2022 (16:59 IST)
ರಾಷ್ಟ್ರೀಯ ಪಕ್ಷ ಎಷ್ಟೇ ಇರಬಹುದು, ಎಷ್ಟೇ ಹೋಗಬಹುದು. ಪ್ರಾದೇಶಿಕ ಪಕ್ಷವನ್ನ ಮುಗಿಸೋ ಕೆಲಸ ಮಾಡಬಾರದು ಎಂದು ಶಾಸಕ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಎಲ್ಲವೂ ಪ್ರಾದೇಶಿಕ ಪಕ್ಷಗಳೇ ಇವೆ.
ರಾಷ್ಟ್ರೀಯ ಪಕ್ಷ ಹೋದ್ರೂ, ಸ್ಥಳೀಯರ ಸಮಸ್ಯೆ ಆಲಿಸಲು ಪ್ರಾದೇಶಿಕ ಪಕ್ಷ ಇರಬೇಕು. ಪ್ರಾದೇಶಿಕ ಪಕ್ಷಕ್ಕೆ ನನ್ನ ಬೆಂಬಲ ಇದ್ದೇ ಇದೆ. ಮಮತಾ ಬ್ಯಾನರ್ಜಿ ನಮ್ಮನ್ನ ಬೈಕೊಂಡು ಓಡಾಡ್ತಿದ್ರೂ. ಪ್ರಾದೇಶಿಕ ಪಕ್ಷ ಇಂದು ದೇಶಕ್ಕೆ ಅತ್ಯವಶ್ಯಕವಾಗಿದೆ. ಆಮ್ ಆದ್ಮಿ ಪಕ್ಷವೂ ಇರಬೇಕು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ