ನಿಮ್ಮ ವಾಹನ ಈಗಲೇ ನೋಂದಣಿ ಮಾಡಿಕೊಳ್ಳಿ : ಏಪ್ರಿಲ್ 1 ರಿಂದ ಕಂಪ್ಯೂಟರೀಕರಣ ಇಲ್ಲ

ಭಾನುವಾರ, 8 ಮಾರ್ಚ್ 2020 (19:08 IST)
ನಿಮ್ಮ ವಾಹನವನ್ನು ಕೂಡಲೇ ನೋಂದಣಿ ಮಾಡಿಕೊಳ್ಳಿ. ಇಲ್ಲಾಂದ್ರೆ ಸಮಸ್ಯೆ ಎದುರಾಗೋದ್ರಲ್ಲಿ ಡೌಟ್ ಇಲ್ವೇ ಇಲ್ಲಾ.

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಎಸ್-4 ವಾಹನಗಳನ್ನು ಖರೀದಿಸಿರುವ ಸಾರ್ವಜನಿಕರು ಕಡ್ಡಾಯವಾಗಿ ಮಾರ್ಚ್ 31 ರೊಳಗೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೀಗಂತ ಕಲಬುರಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಉಪ ಸಾರಿಗೆ ಆಯುಕ್ತ ಕೆ. ದಾಮೋದರ ಸೂಚಿಸಿದ್ದಾರೆ.

ವಾಹನ ಮಾರಾಟಗಾರರು ಕೂಡ ತಮ್ಮಲ್ಲಿರುವ ಎಲ್ಲಾ ತರಹದ ಬಿಎಸ್-4 ವಾಹನಗಳನ್ನು ಮಾರಾಟ ಮಾಡಬೇಕು. ಮಾರಾಟ ಸಂದರ್ಭದಲ್ಲಿ, ಮಾರ್ಚ್ 31ರೊಳಗೆ ನೋಂದಣಿ ಮಾಡಿಕೊಳ್ಳುವ ಷರತ್ತನ್ನು ಖರೀದಿದಾರರಿಗೆ ವಿಧಿಸುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

01-04-2020 ರಿಂದ ಎಲ್ಲಾ ತರಹದ ಬಿಎಸ್-4 ವಾಹನಗಳನ್ನು ನೋಂದಣಿ ಮಾಡಕೂಡದೆಂದು ಆದೇಶಿಸಿರುವ ನ್ಯಾಯಾಲಯ, ಬಿಸ್-6 ವಾಹನಗಳನ್ನು ಮಾತ್ರ ನೋಂದಣಿ ಮಾಡುವಂತೆ ಕಟ್ಟುನಿಟ್ಟಿನ ಅದೇಶ ನೀಡಿರುತ್ತದೆ. ಹಾಗಾಗಿ ಸಾರ್ವಜನಿಕರು ಈಗಾಗಲೇ ಖರೀದಿ ಮಾಡಿ ನೋಂದಣಿ ಮಾಡಿಕೊಳ್ಳದ ( ತಾತ್ಕಾಲಿಕ ನೋಂದಣಿ ಪಡೆದಿದ್ದರೂ ಸಹ) ಹೊಸ ಬಿಎಸ್-4 ವಾಹನಗಳನ್ನು 31-03-2020 ರೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ