ಮಾಗಡಿ ರಸ್ತೆಯ ಟ್ರಾಫಿಕ್ ಜಾಮ್ ಗೆ ಮುಕ್ತಿ

ಬುಧವಾರ, 1 ಫೆಬ್ರವರಿ 2023 (21:57 IST)
ಮಾಗಡಿ ರಸ್ತೆಯ ಬ್ಯಾಡರಹಳ್ಳಿ‌ ಠಾಣ ವ್ಯಾಪ್ತಿ ಟ್ರಾಫಿಕ್ ಪೊಲೀಸ್ರ ಸುಪರ್ಧಿಗೆ ಬಂದಿದ್ದು, ದಶಕಗಳಿಂದ  ಟ್ರಾಫಿಕ್ ಜಾಮ್ ನಿಂದ ಹೈರಾಣಾಗಿದ್ದ ನಾಗರಿಕರಿಗೆ ಮುಕ್ತಿ ಸಿಗುವ ಭರವಸೆ ಮೂಡಿದೆ. ಸದ್ಯ ಕಾಮಕ್ಷಿಪಾಳ್ಯ ಸಂಚಾರ ಪೊಲೀಸ್ರ ಸುಪರ್ಧಿಗೆ ಬ್ಯಾಡರಹಳ್ಳಿ ವ್ಯಾಪ್ತಿಯನ್ನ ಸರ್ಕಾರ ಹಸ್ತಾಂತರ ಮಾಡಿದೆ. ನಗದ ಹೆಬ್ಬಾಗಿಲಾಗಿರೋ ಗೊಲ್ಲರಹಟ್ಟಿ ನೈಸ್ ಜಂಕ್ಷನ್ ಸಾಕಷ್ಟು ಟ್ರಾಫಿಕ್ ಸಮಸ್ಯೆ ಆಗ್ತಿತ್ತು. ಈ ಹಿನ್ನೆಲೆ ಸಂಚಾರ ಠಾಣ ವ್ಯಾಪ್ತಿಗೆ ಬ್ಯಾಡರಹಳ್ಳಿ ಠಾಣ ವ್ಯಾಪ್ತಿಯನ್ನ ಸೇರಿಸಲಾಗಿದೆ. ನೈಸ್ ರಸ್ತೆಯ ಅವೈಜ್ಞಾನಿಕ ಜಂಕ್ಷನ್ ನಿರ್ಮಾಣ ಸಾಕಷ್ಟು ತೊಂದರೆ ಯಾಗ್ತಿತ್ತು. ಅಷ್ಟೇ ಅಲ್ಲದೆ ಅವೈಜ್ಞಾನಿಕ‌ಡಿವೈಡರ್ ನಿಂದ ಟ್ರಾಫಿಕ್ ಕೂಡ ಹೆಚ್ಚಾಗಿದೆ. 
 
ಸದ್ಯ ಈ ಎಲ್ಲಾ ಸಮಸ್ಯೆಗೆ ಬಗೆರಸಿಸಲಿ ಇಂದು ಕುದ್ದು ಪಶ್ಚಿಮ ವಿಭಾಗ ಸಂಚಾರ ಉಪ ಆಯುಕ್ತ ಕುಲ್ ದೀಪ್ ಜೈನ್ ಸ್ಪಾಟ್  ವಿಸಿಟ್ ಮಾಡಿದ್ರು.‌ಇ‌ನ್ಸ್ಪೆಕ್ಟರ್ ಹರೀಶ್ ಮತ್ತು ಅಧಿಕಾರಿ ಸಿಬ್ಬಂದಿಗೆ ಸಂಚಾರ ನಿಯಂತ್ರಣ ಕುರಿತು ಒಂದಷ್ಟು ಮಾಹಿತಿ ನೀಡಿದ್ರು.
 
ಇನ್ನೂ ಕಾಮಕ್ಷಿಪಾಳ್ಯ ಇನ್ಸ್ಪೆಕ್ಟರ್ ಕೂಡ ಸ್ಥಳದಲ್ಲೆ ಮೊಕ್ಕಂ‌ ಹೂಡಿ ಸಂಚಾರ ನಿಯಂತ್ರಣದ ಅಗತ್ಯ ಕ್ರಮಗಳ ಬಗ್ಗೆ ಚಿಂತಿಸಿದ್ದಾರೆ. ಬ್ಯಾಡರಹಳ್ಳಿ ವ್ಯಾಪ್ತಿಯ ಮಾಗಡಿ ರಸ್ತೆಯಲ್ಲಿ ಅವೈಜ್ಞಾನಿಕ ಡಿವೈಡರ್ ಗಳು ಇದ್ದು ಇವಳ ನಿರ್ಭಂಧಕ್ಕೆ ಅಧಿಕಾರಿಗಳು ಮುಂದಾಗಿದ್ಸಾರೆ.
 
ಮುಖ್ಯವಾಗಿ ವಾಹನ ಸವಾರರು ಬೇಕಾಬಿಟ್ಟಿ ವಾಹನ ಚಲಾನೆ. ಹೆಲ್ಮೆಟ್ ರಹಿತ ಚಾಲನೆ. ಹೆಚ್ಚಾಗಿದ್ದು ಮೊದಲಿಗೆ ಒಂದಷ್ಟು ಅರಿವು ಮೂಡಿಸಿ ಮುಂದಿನ ದಿನಗಳಲ್ಲಿ ದಂಡಾಸ್ತ್ರ ಪ್ರಯೋಗ ಮಾಡಿವ ಎಚ್ಚರಿಕೆಯನ್ನು ಪೊಲೀಸ್ರು ನೀಡಿದ್ದಾರೆ‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ