ಲಾಕ್ ಡೌನ್ ಸಡಿಲಿಕೆ ವಾಪಸ್ : ವಕ್ಕರಿಸಿದ ಕೊರೊನಾ
ಲಾಕ್ ಡೌನ್ ನಿಂದ ನೀಡಲಾಗಿದ್ದ ಸಡಿಲಿಕೆಯನ್ನು ಈ ಜಿಲ್ಲೆಯಲ್ಲಿ ವಾಪಸ್ ಪಡೆಯಲಾಗಿದ್ದು, ಲಾಕ್ ಡೌನ್ ಕಠಿಣವಾಗಿ ಮುಂದುವರಿಯಲಿದೆ.
ಕೃಷಿ,ವೈದ್ಯಕೀಯ ಹಾಗೂ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲ ಚಟುವಟಿಕೆಗಳ ಮೇಲೆ ನಿರ್ಭಂದ ವಿಧಿಸಲಾಗಿದೆ. ನಗರದ ಸುತ್ತ 10 ಆರಂಭಿಸಿರುವ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.
ಶಂಕಿತ 50 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಆರು ಜನರನ್ನು ಅವಲೋಕನಕ್ಕೆ ಒಳಪಡಿಸಲಾಗಿದ್ದು, ಆರು ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.