ಎಸ್‌ಐಟಿ ಕಚೇರಿಯಲ್ಲೇ ರಾತ್ರಿ ಕಳೆದ ರೇವಣ್ಣ: ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ

Sampriya

ಭಾನುವಾರ, 5 ಮೇ 2024 (10:14 IST)
Photo Courtesy X
ಬೆಂಗಳೂರು: ಎಸ್‌ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ಶನಿವಾರ ರಾತ್ರಿಯೇ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.

ಪದ್ಮನಾಭನಗರದಲ್ಲಿರುವ ಎಚ್‌.ಡಿ. ದೇವೇಗೌಡರ ಮನೆಯಲ್ಲಿಯೇ ರೇವಣ್ಣ ಸಿಕ್ಕಿಬಿದ್ದರು. ಅವರಿಗೆ ವಾರಂಟ್‌ ತೋರಿಸಿದ ಅಧಿಕಾರಿಗಳು, ವಶಕ್ಕೆ ಪಡೆದು ಅರಮನೆ ರಸ್ತೆಯ ಕಾರ್ಲ್‌ಟನ್‌ ಕಟ್ಟಡದಲ್ಲಿರುವ ಕಚೇರಿಗೆ ಕರೆತಂದರು.  

ರೇವಣ್ಣ ಅವರನ್ನು ಬಿಗಿ ಭದ್ರತೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದ ಅಧಿಕಾರಿಗಳು, ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ರೇವಣ್ಣ ಅವರ ರಕ್ತದೊತ್ತಡ ಹಾಗೂ ಇತರೆ ಆರೋಗ್ಯದ ಬಗ್ಗೆ ತಪಾಸಣೆ ನಡೆಸಲಾಯಿತು.

ಅರ್ಧ ಗಂಟೆಯೂ ಹೆಚ್ಚು ಕಾಲ ರೇವಣ್ಣ ಹಾಗೂ ಅಧಿಕಾರಿಗಳು ಆಸ್ಪತ್ರೆಯಲ್ಲಿದ್ದರು. ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ ವೈದ್ಯರಿಂದ ವರದಿ ಪಡೆದ ಪೊಲೀಸರು, ರೇವಣ್ಣ ಅವರನ್ನು ಪುನಃ ಕಚೇರಿಗೆ ಕರೆತಂದರು.

ರೇವಣ್ಣ ಅವರಿಗೆ ರಾತ್ರಿ ಎಸ್‌ಐಟಿ ಸಿಬ್ಬಂದಿಯೇ ಊಟ ತಂದು ಕೊಟ್ಟರು. ಭಾನುವಾರ ರಾತ್ರಿ ಕಚೇರಿಯಲ್ಲಿಯೇ ರೇವಣ್ಣ ಅವರನ್ನು ಇರಿಸಲಾಯಿತು.

ಮಹಿಳೆಯ ಅಪಹರಣ ಹಾಗೂ ಅಕ್ರಮ ಬಂಧನ ಪ್ರಕರಣದಲ್ಲಿ ರೇವಣ್ಣ ಅವರನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ