ಪಠ್ಯಪುಸ್ತಕ ಕೈ ಬಿಡುವ ವಿಚಾರವೇ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ ಸ್ಪಷ್ಠಣೆ
ಗುರುವಾರ, 23 ಜೂನ್ 2022 (19:40 IST)
ಪಠ್ಯಪುಸ್ತಕ ಕೈ ಬಿಡುವ ವಿಚಾರವೇ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ ಸ್ಪಷ್ಠಣೆ ನೀಡಿದ್ದಾರೆ. ಪಠ್ಯಪುಸ್ತಕ ಪುನರ್ ರಚಿಸಬೇಕು ಎಂದು ಸಾಕಷ್ಟು ಸಂಘನೆಗಳು ಹಾಗೂ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡಿತ್ತು. ಅಲ್ಲದೇ ಮಾಜಿ ಪ್ರಧಾನಿ ದೇವೆಗೌಡರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಸಿಎಂಗೆ ಪತ್ರ ಕೂಡಾ ದೇವೇಗೌಡರು ಬರೆದಿದ್ರು. ಈ ಬೆನ್ನಲೆ ವಿಧಾನಸೌದಲ್ಲಿ ಮಾದ್ಯಮ ಗೋಷ್ಠಿ ನಡೆಸಿ ಮಾತನಾಡಿದ ಆರ್ ಅಶೋಕ ಬಸವಣ್ಣ, ಸಿದ್ದಗಂಗಾ ಶ್ರೀ, ಸಂವಿಧಾನಶಿಲ್ಪಿ ಅಂಬೇಡ್ಕರ್, ಆದಿಚುಂಚನಗಿರಿ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿನ ಲೋಪಗಳನ್ನು ಸರಿಪಡಿಸಿ ಅದನ್ನು ಪಠ್ಯಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.ಇನ್ನೂ ಕಾಂಗ್ರೆಸ್ ಗೆ ಹಿಂದೂ ದೇವರು ಇರಬಾರದು, ಸ್ವಾತಂತ್ರ್ಯ ಹೋರಾಟಗಾರರು ಇರಬಾರದು ಎಂಬುದು ಅವರ ಚಿಂತನೆ. ಭಾರತೀಯ ಪರಂಪರೆ, ಭಾರತೀಯ ಸಂಸ್ಕೃತಿಯನ್ನು ನಾವು ಸೇರಿಸಿದ್ದೇವೆ. ಅವರ ಕಾಲದಲ್ಲಿ ಪಠ್ಯದಲ್ಲಿ 150 ತಪ್ಪುಗಳು ಆಗಿದ್ದವು. ಆದರೀಗ 7-8 ತಪ್ಪುಗಳನ್ನು ದೊಡ್ಡದಾಗಿ ಬಿಂಬಿಸಿದ್ದಾರೆ. ಹಳೇ ಪಠ್ಯವನ್ನೇ ಮುಂದುವರಿಸಿ ಎಂದು ಆಗ್ರಹಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಪರಿಷ್ಕೃತ ಪಠ್ಯ ಪುಸ್ತಕ ಸಮಿತಿ, ರಾಷ್ಟ್ರಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕುರಿತ ಗದ್ಯ, ಅಜ್ಜಯ್ಯನ ಅಭ್ಯಂಜನ ಕೈ ಬಿಟ್ಟಿತ್ತು. ಬೆಂಗಳೂರು ಪರಿಚಯಿಸುವ ಪಾಠದಲ್ಲಿ ನಾಡಪ್ರಭು ಕೆಂಪೇಗೌಡ ಉಲ್ಲೇಖವಿರಲಿಲ್ಲ. ರಾಷ್ಟ್ರಧ್ವಜ ಕುರಿತ ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ಪದ್ಯ, ನಾಡಿನ ಅಭಿಮಾನದ ಗೀತೆ ಚೆಲುವ ಕನ್ನಡ ನಾಡಿದು ಎಂಬ ಗೀತೆ ತೆಗೆಯಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.