ಯಮಲೂರು ಟೂ ಕರಿಯಮ್ಮನ ಅಗ್ರಹಾರ ಸಂಪರ್ಕ ಕಲ್ಪಿಸುವ ರಸ್ತೆಯನ್ನ ಪೊಲೀಸರು ಬ್ಯಾರಿಕೇಡ್ ಗಳನ್ನ ಹಾಕಿ ಪೊಲೀಸರು ಕ್ಲೋಸ್ ಮಾಡಿದ್ದಾರೆ.ನಿನ್ನೆ ರಾತ್ರಿ ಕಾರು ಬೈಕ್ ಗಳು ನೀರಿನಲ್ಲಿ ಸಿಲುಕಿಕೊಂಡು ವಾಹನ ಸವಾರರು ಪರದಾಡಿದ್ರು .ನಿನ್ನೆ ರಾತ್ರಿಯಿಂದ ಎರಡು ಕಾರು ನೀರಿನಲ್ಲೇ ಇದೆ .ರಸ್ತೆ ದಾಟಲು ನಿವಾಸಿಗಳು ಹರಸಾಹಸಪಡುತ್ತಿದ್ದಾರೆ.ಕಾರುಗಳನ್ನು ಸ್ಥಳದಲ್ಲೇ ಬಿಟ್ಟು ಕಾರು ಚಾಲಕರು ಮನೆ ಸೇರಿದ್ರು.ನಿನ್ನೆ ರಾತ್ರಿ ಈ ರೋಡ್ ಸಂಪೂರ್ಣ ಜಲಾವೃತಗೊಂಡು ಪ್ರಾಣಪಾಯದಿಂದ ಚೂರರಲ್ಲಿ ವಾಹನ ಸವಾರರು ತಪ್ಪಿಸಿಕೊಂಡ್ರು.ಟ್ರ್ಯಾಕ್ಟರ್ ಮೂಲಕ ನೀರಿನಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಲಾಗಿದೆ.
ರಾಜಧಾನಿಯಲ್ಲಿ ನಿನ್ನೆ ವರುಣನ ಆರ್ಭಟದಿಂದ ಲೀ ಮೆರಿಡಿಯನ್ ಅಂಡರ್ ಪಾಸ್ ಜಲಾವೃತವಾಗಿದೆ.ಅಂಡರ್ ಪಾಸ್ ನಲ್ಲಿ ನೀರು ತುಂಬಿರುವ ಕಾರಣ ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಲಾಗಿದೆ.ಇತ್ತೀಚಿಗಷ್ಟೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೆಡಿ ಅಂಡರ್ ಪಾಸ್ ಮಾಡಲಾಗಿದ್ದು,ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೂಫ್ ಟಾಪ್ ಹಾಕಲಾಗಿತ್ತು.ಇಷ್ಟಾದರೂ ನೀರು ನುಗ್ಗಿ ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಲಾಗಿತ್ತು.ಆದ್ರೆ ಇದೀಗ ಮತ್ತೊಮ್ಮೆ ಬಿಬಿಎಂಪಿ ಕಳಪೆ ಕಾಮಗಾರಿ ಬಟಾ ಬಯಲಾಗಿದೆ.