ಬೆಂಗಳೂರಿನಲ್ಲಿ ಮತ್ತ ಮತ್ತೆ ಕುಸಿಯುತ್ತಿರುವ ರಸ್ತೆಗಳು

ಮಂಗಳವಾರ, 17 ಜನವರಿ 2023 (13:30 IST)
ಬೆಂಗಳೂರಿನಲ್ಲಿ ಗುಂಡಿ  ಕಮ್ಮಿಯಾಗುವ ಲಕ್ಷಣ ಕಾಣ್ತಿಲ್ಲ.ಬಿಬಿಎಂಪಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ನಲ್ಲಿ   ಸಾವಿರಾರು ದೂರುಗಳು ಬರ್ತಿದೆ.ಆ್ಯಪ್ ಲಾಂಚ್ ಆಗಿ 13 ದಿನಕ್ಕೆ ಬರೊಬ್ಬರಿ 2,437 ದೂರು ದಾಖಲಾಗಿದೆ.ಬಿಬಿಎಂಪಿ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ನಲ್ಲಿ ನಿತ್ಯ ಸರಾಸರಿ 187 ಕೇಸ್ ಗಳು ದಾಖಲಾಗ್ತಿದೆ.ಗುಂಡಿ ಸಮಸ್ಯೆಗೆ ಜನರು ದೂರು‌ ನೀಡಲು ಬಿಬಿಎಂಪಿ‌ ಲಾಂಚ್‌ ಮಾಡಿರುವ ಫಿಕ್ಸ್ ಮೈ ಸ್ಟ್ರೀಟ್‌ ಆ್ಯಪ್ ಬಳಸುತ್ತಿದ್ದಾರೆ.ಜನವರಿ 2 ರಿಂದ‌ ಇವತ್ತಿನ‌ ತನಕ ಒಟ್ಟು 2, 437 ದೂರುಗಳು ದಾಖಲಾಗಿದೆ.ಆಯಕ್ತರು ಬೆಂಗಳೂರಿನಲ್ಲಿ‌ ಕೇವಲ 1500 ಗುಂಡಿ ಬಾಕಿಯಿದೆ‌ ಎಂದಿದ್ದರು.
 
ಇನ್ನೂ ಬೆಂಗಳೂರು ಜಲ ಮಂಡಳಿಯ ಮ್ಯಾನ್ ಹೋಲ್ ರಿಪೇರಿಯ ನಿರ್ಲಕ್ಷ್ಯದಿಂದ ರಸ್ತೆ ಕುಸಿತ ಉಂಟಾಗಿದೆ .ಮಹಾಲಕ್ಷ್ಮಿ ಲೇಔಟ್ ಮುಖ್ಯ ರಸ್ತೆಯ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ರಸ್ತೆ ಕುಸಿದಿದೆ.ಮ್ಯಾನ್ ಹೋಲ್ ರಿಪೇರಿ ಆಗದ ಹಿನ್ನೆಲೆ ಯಲ್ಲಿ  ಲಿಕೇಜ್ ನಿಂದ ಇಂದು ಬೆಳಗ್ಗೆ ರಸ್ತೆ ಕುಸಿತದಿದ್ದು,ಹಳೆ ಮ್ಯಾನ್ ಹೋಲ್ ಮೇಲೆ ಇಂದು ಬೆಳಗ್ಗೆ ಲಾರಿ ಹೋಗಿದೆ. ಪರಿಣಾಮ ಗುಂಡಿ ಬಿದ್ದಿದೆ.ಜಲಮಂಡಳಿಯ  ನಿರ್ಲಕ್ಷಕ್ಕೆ ಜನರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ