ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ರೌಡಿಗಳ ಅಟ್ಟಹಾಸ!
ಹಲಸೂರು ಮಾರುಕಟ್ಟೆ ಸುತ್ತಮತ್ತ ಓಡಾಡುವ ಮಹಿಳೆಯರಿಗೆ, ಜನರಿಗೆ ಅಭದ್ರತೆ ಕಾಡುತ್ತಿದೆ. ಕಿರಾತಕರು ರಸ್ತೆಯಲ್ಲಿ ಓಡಾಡುವವರ ಮೇಲೆ ಹಲ್ಲೆ ಮಾಡಿ ಅಸಭ್ಯ ಪದಗಳಿಂದ ನಿಂದನೆ ಮಾಡ್ತಾರೆ.
ಕಿಡಿಗೇಡಿಗಳಿಗಳಿಗೆ ಸ್ಥಳೀಯ ಪೊಲೀಸರ ಭಯವಂತು ಇಲ್ಲದಂತಾಗಿದೆ ದಯವಿಟ್ಟು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಪುಂಡರ ವಿರುದ್ಧ ಕ್ರಮ ಜರಗಿಸುವಂತೆ ಟ್ವೀಟ್ ಮೂಲಕ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.