ಫುಟ್‌ಬಾಲ್‌ ಮೈದಾನದಲ್ಲಿ ರೌಡಿಶೀಟರ್ ಹತ್ಯೆ

ಸೋಮವಾರ, 13 ಸೆಪ್ಟಂಬರ್ 2021 (22:22 IST)
ಎರಡು ದಿನಗಳ ಹಿಂದಷ್ಟೇ ಅಶೋಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ರಾಜ್ಯ ಫುಟ್‍ಬಾಲ್ ಅಸೋಸಿಯೇಷನ್ (ಕೆಎಸ್‍ಎಫ್?ಎ) ಮೈದಾನದಲ್ಲಿ ಹತ್ಯೆಗೀಡಾದ ರೌಡಿಶೀಟರ್ ಅರವಿಂದ್(30) ಕೊಲೆಗೆ ಹಳೇ ದ್ವೇಷವೇ ಕಾರಣ ಎಂಬುದು ಪೆÇಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮತ್ತೊಂದೆಡೆ ಹಂತಕರು ಅರವಿಂದ್‍ನನ್ನು ಅಟ್ಟಾಡಿಸಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ  ಪತ್ತೆಯಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದಷ್ಟೇ ಅರವಿಂದ್, ಸುಭಾಷ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದ ಎಂದು ಹೇಳಲಾಗಿದೆ. ಅದೇ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಪ್ರಾಣ ಉಳಿಸಿಕೊಳ್ಳಲು ಫುಟ್ಬಾಲ್ ಮೈದಾನಕ್ಕೆ ನುಗ್ಗಿದ ಅರವಿಂದ್‍ನನ್ನು ನಾಲ್ವರು ಹಂತಕರು ಮಾರಕಾಸ್ತ್ರಗಳನ್ನು ಹಿಡಿದು ಫುಟ್ಬಾಲ್ ಮೈದಾನಕ್ಕೆ ನುಗ್ಗಿರುವ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ಪೆÇಲೀಸರು ಹೇಳಿದರು.
ಸಿಸಿ ಕ್ಯಾಮೆರಾದಲ್ಲಿ ಏನಿದೆ?
ಆರಂಭದಲ್ಲಿ ಹಲ್ಲೆಗೊಳಗಾಗಿದ್ದ ಅರವಿಂದ್ ಪ್ರಾಣ ಉಳಿಸಿಕೊಳ್ಳಲು ಫುಟ್ಬಾಲ್ ಮೈದಾನಕ್ಕೆ ಓಡಿದ್ದಾನೆ. ಆಗ ನಾಲ್ವರ ಪೈಕಿ ಮೂವರು ಹೆಲ್ಮೆಟ್ ಧರಿಸಿ, ಮತ್ತೊಬ್ಬ ಹೆಲ್ಮೆಟ್ ಧರಿಸದೆ ಮಾರಕಾಸ್ತ್ರಗಳನ್ನು ಹಿಡಿದು ಮೈದಾನದೊಳಗೆ ಅರವಿಂದ್‍ನನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಮೈದಾನದ ಒಳಾಂಗಣದಲ್ಲೂ ಹಂತಕರ ಹುಡುಕಾಟ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ. ಬಳಿಕ ಅರವಿಂದ್ ರೆಪ್ರಿ ಕೊಠಡಿಯೊಳಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾನೆ. ಆರೋಪಿಗಳು ಬಾಗಿಲು ಮುರಿದು ಒಳನುಗ್ಗಿ ಆರೋಪಿಯ ತಲೆ, ಮುಖ, ಕತ್ತಿಗೆ ಭಾಗಗಕ್ಕೆ ಲಾಂಗ್ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರವಿಂದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ ಅರವಿಂದ್ ವಿರುದ್ಧ ಭಾರತೀನಗರ ಪೆÇಲೀಸ್ ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲಾಗಿತ್ತು. ಭಾರತಿನಗರ ಪೆÇಲೀಸರು ಗೂಂಡಾ ಕಾಯಿದೆಯಡಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಎರಡು ತಿಂಗಳ ಹಿಂದಷ್ಟೇ ಜಾಮೀನು ಪಡೆದು ಹೊರಬಂದಿದ್ದ ಅರವಿಂದ್, ಪುಟ್ಬಾಲ್ ತಂಡವೊಂದರ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಸೆ.12ರಂದು ಸಂಜೆ ತನ್ನ ಕೆಡಿಎಫ್ ತಂಡದ ಜತೆ ಆಟವಾಡುತ್ತಿದ್ದಾಗ ಅರವಿಂದ್ ಮೇಲೆ ನಾಲ್ವರು ಮಾರಕಾಸ್ತ್ರಗಳನ್ನು ಬೀಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡ ಅರವಿಂದ್, ಮೈದಾನಕ್ಕೆ ನುಗ್ಗಿದ್ದಾನೆ. ಬಳಿಕ ರೆಫ್ರಿ ಕೊಠಡಿಗೆ ತೆರಳಿ ಲಾಕ್ ಮಾಡಿಕೊಂಡಿದ್ದಾನೆ. ಆದರೂ ಬಿಡದ ಹಂತಕರು ಬಾಗಿಲು ಮುರಿದು ಒಳ ನುಗ್ಗಿ ಹತ್ಯೆಗೈದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ