ಆರೆಸ್ಸೆಸ್ ಮುಖಂಡ ರುದ್ರೇಶ್ ಕೊಲೆ: ಎನ್`ಐಎ ಕೋರ್ಟ್`ಗೆ ಚಾರ್ಜ್ ಶೀಟ್ ಸಲ್ಲಿಕೆ

ಶುಕ್ರವಾರ, 21 ಏಪ್ರಿಲ್ 2017 (22:59 IST)
ಆರೆಸ್ಸೆಸ್ ಮುಖಂ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತ ಎನ್`ಐಎ ಕೋರ್ಟ್`ಗೆ ಚಾರ್ಜ್ ಸೀಟ್ ಸಲ್ಲಿಸಲಾಗಿದೆ. ಇರ್ಫಾನ್ ಪಾಷಾ, ವಸೀಮ್ ಅಹ್ಮದ್, ಮೊಹ್ಮದ್ ಸಾದಿಕ್, ಮೊಹ್ಮದ್ ಮಜೀಬುಲ್ಲಾ, ಆಸೀಮ್ ಶರಫ್ ವಿರುದ್ಧ ಚಾರ್ಜ್ ಶಿಟ್ ಸಲ್ಲಿಸಲಾಗಿದೆ.

ಆರೋಪಿಗಳು ಪಿಎಫ್ಐ ಸಂಘಟನೆಗೆ ಸೇರಿದ್ದವರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ರುದ್ರೇಶ್`ಗೂ ಆರೋಪಿಗಳಿಗೂ ಯಾವುದೇ ವೈಯಕ್ತಿಕ ದ್ವೇಷವಿಲಿಲ್ಲ. ಆರೆಸ್ಸೆಸ್ ಸಮವಸ್ತ್ರದಲ್ಲಿರುವವರನ್ನ ಕೊಂದು ಆ ಸಂಘಟನೆ ಸೇರುವವರಿಗೆ ಭಯ ಹುಟ್ಟಿಸುವುದು ಇವರ ಉದ್ದೇಶವಾಗಿತ್ತು. ಸಂಘಟನೆ ಸಭೆ ಕರೆದು ಇಸ್ಲಾಂ ಮತ್ತು ಜಿಹಾದಿಗಳ ವಿರುದ್ಧ ಮಾತನಾಡುವವರ ವಿಡಿಯೋ ತೋರಿಸುತ್ತಿದ್ದರು. ಪ್ರಚೋದನೆಗೊಳ್ಳುತ್ತಿದ್ದವರನ್ನ ಆಯ್ಕೆ ಮಾಡಿ ಹತ್ಯೆಗೆ ಕಳುಹಿಸುತ್ತಿದ್ದರೆಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಅಕ್ಟೋಬರ್ 16, 2016ರಂದು ರುದ್ರೇಶ್ ಪಥ ಸಂಚಲನ ಮುಗಿಸಿಕೊಂಡು ಸಮವಸ್ತ್ರದಲ್ಲೇ ಮನೆ ಕಡೆ ಹೊರಟಿದ್ದರು. ಮಾರ್ಗ ಮಧ್ಯೆ ಶಿವಾಜಿನಗರದ ಕಾಮರಾಜ ರಸ್ತೆಯಲ್ಲಿ ಬೈಕ್`ನಲ್ಲಿ ಬಂದವರು ಒಂದೇ ಏಟಿಗೆ ಕತ್ತು ಕತ್ತರಿಸಿ ಭೀಕರವಾಗಿ ಕೊಂದಿದ್ದರು.

 


ವೆಬ್ದುನಿಯಾವನ್ನು ಓದಿ