ಉಕ್ರೇನ್‌ ದಾಳಿಗೆ ರಷ್ಯಾ ನೌಕೆ ಧ್ವಂಸ

ಶುಕ್ರವಾರ, 15 ಏಪ್ರಿಲ್ 2022 (20:22 IST)
ಉಕ್ರೇನ್-ರಷ್ಯಾ ಯುದ್ಧವು 51ನೇ ದಿನಕ್ಕೆ ಕಾಲಿಟ್ಟಿದೆ..ಉಕ್ರೇನ್ ನಿರ್ಮಿತ ಜಲಾಂತರ್ಗಾಮಿ ನಿರೋಧಕ ಕ್ಷಿಪಣಿಗಳು ರಷ್ಯಾದ ಪ್ರಮುಖ ಯುದ್ಧನೌಕೆ ‘ಮೊಸಕ್ವಾ’ ಮೇಲೆ ಅಪ್ಪಳಿಸಿದ್ದು, ಕಪ್ಪು ಸಮುದ್ರದಲ್ಲಿ ಯುದ್ಧ ನೌಕೆ ಮುಳುಗಿದೆ..ನೌಕೆಗೆ ಕ್ಷಿಪಣಿಗಗಳು ಅಪ್ಪಳಿಸಿದ ನಂತರ ಬೆಂಕಿ ಹೊತ್ತಿಕೊಂಡಿತು..ಹಡಗಿನಲ್ಲಿದ್ದ ಎಲ್ಲಾ 500 ಸಿಬ್ಬಂದಿಯನ್ನೂ ರಕ್ಷಿಸಲಾಗಿದೆ. ಸಮುದ್ರ ಪ್ರಕ್ಷುಬ್ಧವಾಗಿದ್ದರಿಂದ ಹಡಗು ಮುಳುಗಿತು ಎಂದು ರಷ್ಯಾದ ರಕ್ಷಣಾ ಇಲಾಖೆ ಹೇಳಿದೆ... ಸಮರ ನೌಕೆ ಮುಳುಗಿರುವುದು ರಷ್ಯಾಕ್ಕೆ ಆಗಿರುವ ದೊಡ್ಡ ನಷ್ಟ ಎಂದು ಅಮೆರಿಕ ವಿಶ್ಲೇಷಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ