ಕೊನೆಗೂ ಬಯಲಾಯಿತು ಸೈಯದ್ ಉನ್ನೀಸಾ ಕೊಲೆ ರಹಸ್ಯ

ಬುಧವಾರ, 22 ಜೂನ್ 2016 (10:21 IST)
ಕಳೆದ ವಾರ ಬಸವನಗುಡಿಯಲ್ಲಿ ನಡೆದಿದ್ದು 50 ವರ್ಷದ ಸೈಯ್ಯದ ಉನ್ನೀಸಾ ಹತ್ಯೆ ರಹಸ್ಯವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉನ್ನೀಸಾಳನ್ನು ಕೊಲೆಗೈದಿದ್ದು ಆಕೆಯ ಸ್ವಂತ ಅಳಿಯ ಎಂಬ ಸತ್ಯ ಬಯಲಾಗಿದೆ. 

ಬಸವನಗುಡಿಯ ಖಾಜಿ ಸ್ಟ್ರೀಟ್‍ನಲ್ಲಿ ಜೂನ್ 18ರ೦ದು ಸೈಯದ್ ಉನ್ನೀಸಾ (50) ಬರ್ಬರವಾಗಿ ಕೊಲೆಯಾಗಿದ್ದಳು. ಆಕೆ ಮನೆಯಲ್ಲಿ ಒಬ್ಬಳೇ ಇದ್ದಾಗ ನಕಲಿ ಕೀ ಬಳಸಿ ಒಳನುಗ್ಗಿದ್ದ ನೀಲಸ೦ದ್ರದ ಆರ್.ಕೆ. ಗಾಡ೯ನ್ ನಿವಾಸಿ ಮಹಮ್ಮದ್ ಅಖಿರ್ ಉರ್ ರೆಹಮಾನ್ (38) ಉಸಿರುಗಟ್ಟಿಸಿ ಕೊಂದಿದ್ದ. 
 
ಆಕೆ ತನ್ನ ಮೇಲೆ ಮಾಟಮಂತ್ರ ಮಾಡಿಸುತ್ತಿದ್ದಳು. ಹೀಗಾಗಿ ಕೊಲೆ ಮಾಡಿದ್ದೇನೆ ಎಂದು ಆರೋಪಿ ಕೃತ್ಯದ ಹಿಂದಿನ ಉದ್ದೇಶವನ್ನು ಹೊರಗೆ ಹಾಕಿದ್ದಾನೆ. 
 
ಷೇರು ಹೂಡಿಕೆಗಾಗಿ ಅತ್ತೆ ಬಳಿ ಒಮ್ಮೆ ಹಣ ಇಸಿದುಕೊಂಡಿದ್ದ ಆತ, ಆಕೆ ಮತ್ತೆ ಹಣ ಕೊಡದಿದ್ದುದಕ್ಕೆ ಕೋಪಗೊಂಡು ಈ ಕೃತ್ಯವೆಸಗಿದ್ದಾನೆ ಎಂದು ತಿಳಿದು ಬಂದಿದೆ. 
 
 ಆರೋಪಿಯ ಕೈಗಾದ ಗಾಯದ ಸುಳಿವು ಹಿಡಿದು ಹೊರಟ ಪೊಲೀಸರು ಆತನಿಂದ ಸತ್ಯವನ್ನು ಹೊರಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ