ತನಿಖಾ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂತೋಷ್ ಹೆಗ್ಡೆ ಅಸಮಾಧಾನ

ಬುಧವಾರ, 17 ಮೇ 2017 (20:38 IST)
ತನಿಖಾ ಸಂಸ್ಥೆಗಳ ಬೇಜವಾಬ್ದಾರಿ ಕಾರ್ಯನಿರ್ವಹಣೆಯಿಂದ ಆರೋಪಿಗಳಿಗೆ ಕ್ಲಿನ್ ಚಿಟ್ ದೊರೆಯುತ್ತಿದೆ ಎಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಸುಪ್ರೀಂಕೋರ್ಟ್ ಮೂರು ತಿಂಗಳಲ್ಲಿ ವರದಿ ನೀಡುವಂತೆ ಆದೇಶಿಸಿದ್ದರಿಂದ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ತನಿಖಾಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಎಸ್‌ಐಟಿ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಗುಡುಗಿದ್ದಾರೆ.
 
ಅಕ್ರಮ ಗಣಿಗಾರಿಕೆ ಕುರಿತಂತೆ 2011ರಲ್ಲೇ ಸರಕಾರಕ್ಕೆ ವರದಿ ನೀಡಿದ್ದೇನೆ. ಆದರೆ, ಸರಕಾರ ವರದಿ ಅನುಷ್ಠಾನಕ್ಕೆ ತರಲೇ ಇಲ್ಲ ಎಂದು ಕಿಡಿಕಾರಿದರು.     
 
ಬಲಿಷ್ಠರನ್ನು, ದೊಡ್ಡ ಹುದ್ದೆಯಲ್ಲಿರುವವರನ್ನು ತನಿಖಾ ಸಂಸ್ಥೆಗಳು ಮುಟ್ಟುತ್ತಲೇ ಇಲ್ಲ. ಒಂದು ವೇಳೆ, ಮುಟ್ಟಿದರೂ ಬಿ ರಿಪೋರ್ಟ್ ಹಾಕುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
 
ತನಿಖಾ ಸಂಸ್ಥೆಗಳೇ ಹಗರಣಗಳನ್ನು ಮುಚ್ಚಿಹಾಕುತ್ತಿವೆಯಾ ಎನ್ನುವ ಸಂಶಯ ಜನರನ್ನು ಕಾಡುತ್ತಿವೆ. ಗಣಿ ಧೂಳಲ್ಲಿ ಪ್ರಕರಣಗಳು ಮುಚ್ಚಿಹೋಗುತ್ತಿವೆಯಾ ಎನ್ನುವ ಅನುಮಾನ ಕೂಡಾ ಬಲಗೊಳ್ಳುತ್ತಿದೆ ಎಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ