ಏಕಾಏಕಿ ಅರಣ್ಯಾಧಿಕಾರಿಗಳ ಎಂಟ್ರಿಗೆ ಸವದಿ ಪತ್ನಿ ಶಾಕ್..!
ಹುಲಿ ಉಗುರು ಪ್ರಕರಣ ಸಂಬಂಧಪಟ್ಟಂತೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇರುವ ಶಾಸಕ ಲಕ್ಷ್ಮಣ ಸವದಿ ಮನೆಗೆ ಅರಣ್ಯಾಧಿಕಾರಿಗಳು ಧೀಢಿರ್ ಭೇಟಿ ನೀಡಿದ್ರು.
ಅರಣ್ಯಾಧಿಕಾರಿಗಳ ಭೇಟಿಗೆ ಪುಷ್ಪಾ ಸವದಿ ಶಾಕ್ ಆಗಿದ್ದು, ಎಂಎಲ್‌ಎ ಮನೆಗೆ ಹೀಗೆ ಒಮ್ಮಿಂದೊಮ್ಮೆ ನುಗ್ಗಬಹುದಾ ಎಂದು ಸವದಿ ಪತ್ನಿ ಪ್ರಶ್ನಿಸಿದ್ದಾರೆ. ಪುಷ್ಪ ಸವದಿ ಅವರ ಮಾತಿಗೆ ಉತ್ತರಿಸದೆ ಅರಣ್ಯ ಇಲಾಖೆ ಸಿಬ್ಬಂದಿ ಹೊರಬಂದಿದ್ದಾರೆ. ಸದ್ಯ ಸಿಬ್ಬಂದಿ ಚಿದಾನಂದ ಸವದಿಯಿಂದ ಹುಲಿ ಉಗುರು ಮಾದರಿ ವಶ ಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.