ಸ್ಯಾಂಟ್ರೋ ಪತ್ನಿ ಮನೆಯಲ್ಲಿ ಸರ್ಚಿಂಗ್​​

ಬುಧವಾರ, 11 ಜನವರಿ 2023 (20:28 IST)
ಸ್ಯಾಂಟ್ರೋ ರವಿಯ ಕ್ರೈಂ ಕಹಾನಿ ಬೆಚ್ಚಿ ಬೀಳಿಸುವಂತಿದೆ. 9 ದಿನವಾದ್ರೂ ಖತರ್ನಾಕ್‌ ಸ್ಯಾಂಟ್ರೋ ರವಿ ಪತ್ತೆಯಾಗಿಲ್ಲ. 
ADGP ಅಲೋಕ್​​ ಕುಮಾರ್​​ ಮೈಸೂರು ಭೇಟಿ ಬಳಿಕ ಖಾಕಿ ಅಲರ್ಟ್ ಆಗಿದೆ. 11 ತಂಡಗಳ ಮೂಲಕ ಸ್ಯಾಂಟ್ರೋ ರವಿಗಾಗಿ ಹುಡುಕಾಟ ನಡೆಸಲಾಗ್ತಿದೆ. ಕೇರಳ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಆರೋಪಿಗಾಗಿ ಸರ್ಚಿಂಗ್‌ ಮಾಡಲಾಗ್ತಿದೆ. ಕೋರ್ಟ್​​​ ಮೂಲಕ ಸ್ಯಾಂಟ್ರೋ ರವಿ ಶರಣಾಗುವ ಸಾಧ್ಯತೆ ಇದೆ. ಬೆಂಗಳೂರಿನ R.R.ನಗರದಲ್ಲಿರುವ ರವಿಯ ಮನೆ ಹಾಗೂ ರವಿ ಪತ್ನಿ ವನಜಾಕ್ಷಿಯ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ನರಸಿಂಹರಾಜ ಠಾಣೆಯ ಪೊಲೀಸರು ಸರ್ಚ್ ವಾರೆಂಟ್​​ನೊಂದಿಗೆ ಎಂಟ್ರಿ ಕೊಟ್ಟು ತನಿಖೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ