ಜೀತದಾಳುಗಳಾಗುವುದು ನಾಚಿಕೆಗೇಡಿತನದ ಸಂಗತಿ: ಕಾಗೋಡು ತಿಮ್ಮಪ್ಪ

ಮಂಗಳವಾರ, 11 ಏಪ್ರಿಲ್ 2017 (14:25 IST)
ಕೊಡಗಿನಲ್ಲಿ ಇನ್ನೂ ಜೀತದಾಳಿ ಪದ್ದತಿಯಿದೆ. ಜೀತದಾಳುಗಳಾಗುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ಕಂದಾಯ ಖಾತೆ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
 
ಕೊಡಗು ಜಿಲ್ಲೆಯ ದಿಡ್ಡಳ್ಳಿ ಪ್ರದೇಶದ ವಾಸಿಗಳು ನಿರಾಶ್ರಿತರಾಗಿ ಜೀತದಾಳುಗಳಾಗಿದ್ದಾರೆ. ಪರ್ಯಾಯ ಕಂದಾಯ ಭೂಮಿ ಕಲ್ಪಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ. 
 
ಜಿಲ್ಲೆಯಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿರುವ ಬಗ್ಗೆ ವರದಿಗಳಿವೆ. ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವುದು ಖಚಿತವಾದಲ್ಲಿ ಒತ್ತುವರಿದಾರರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಗುಡುಗಿದ್ದಾರೆ.
 
ದಿಡ್ಡಳ್ಳಿಯಲ್ಲಿ 577 ಆದಿವಾಸಿ ಕುಟುಂಬಗಳಿದ್ದು. ಜೀತ ಮುಕ್ತಿಗೊಳಿಸಲು ನಿರಾಶ್ರಿತರಿಗೆ ಸರಕಾರದಿಂದ ದೊರೆಯುವ ಸೌಲಭ್ಯ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಕಂದಾಯ ಖಾತೆ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ