ಬೆಂಗಳೂರು: ಬೆಂಗಳೂರು ಮೂಲದ ಯುವತಿಯೋರ್ವಳು ತಾನು 17 ವರ್ಷದವಳಿದ್ದಾಗ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ವರುಣ್ ಕುಮಾರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ದೂರು ನೀಡಿದ್ದಾಳೆ.ಭಾರತ ಹಾಕಿ ತಂಡದ ಕ್ರೀಡಾಪಟು ವರುಣ್ ಕುಮಾರ್ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.ಪ್ರಸ್ತುತ ಯುವತಿಗೆ 22 ವರ್ಷ ವಯಸಾಗಿದ್ದು 2019 ರಲ್ಲಿ ತಾವಿಬ್ಬರೂ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾಗಿ ಹೇಳಿಕೊಂಡಿದ್ದಾಳೆ. ಬೆಂಗಳೂರಿನ ಸಾಯ್ ಸ್ಟೇಡಿಯಂನಲ್ಲಿ ಹಾಕಿ ಪಂದ್ಯಾವಳಿಗಳು ನಡೆಯುವಾಗ ಇಲ್ಲಿಗೆ ಬರುತ್ತಿದ್ದ ವರುಣ್ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದರು ಎಂದು ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಹಿಮಾಚಲ ಪ್ರದೇಶ ಮೂಲದ ವರುಣ್ ಕುಮಾರ್ ಇಗ ಪಂಜಾಬ್ ನ ಜಲಂಧರ್ ನಲ್ಲಿ ವಾಸಿಸುತ್ತಿದ್ದು, ತಾನು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ತನ್ನಿಂದ ತಲೆಮರೆಸಿಕೊಂಡಿದ್ದಾನೆಂದು ಯುವತಿ ದೂರಿದ್ದಾಳೆ. ಕಳೆದ ಒಲಿಂಪಿಕ್ಸ್ ನಲ್ಲಿ ಭಾರತ ತಂಡ ಕಂಚಿನ ಪದಕ ಗಳಿಸಿದಾಗ ಹಿಮಾಚಲ ಪ್ರದೇಶ ಸರ್ಕಾರ ವರುಣ್ ಕುಮಾರ್ ಗೆ 1 ಕೋಟಿ ರೂ. ಬಹುಮಾನ ನೀಡಿತ್ತು.