ಬೆಂಗಳೂರು : ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಒಂದೇ ವರ್ಷ ಇರೋದು ಅಂತ ಬಿಜೆಪಿಯವರು ಹೇಳ್ತಾರೆ. ಆದರೆ ಈ ಯೋಜನೆ 5 ವರ್ಷ ಪೂರ್ತಿ ಇರುತ್ತೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಶಕ್ತಿಗೆ ವಿಧಾನಸೌಧದಲ್ಲಿ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತ್ತೆ ಚುನಾವಣೆ ಆಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಆಮೇಲೂ ಉಚಿತ ಕೊಡ್ತೀವಿ. 10 ವರ್ಷವೂ ಉಚಿತ ಕೊಡ್ತೀವಿ ಎಂದು ಭರವಸೆ ನೀಡಿದರು.
ಬಸ್ ಸ್ಟಾಪ್ ಇರೋ ಕಡೆ ಬಸ್ ಕಡ್ಡಾಯವಾಗಿ ನಿಲ್ಲಿಸಬೇಕು. ನಮ್ಮ ಇಲಾಖೆಗೆ ಒಳ್ಳೆ ಹೆಸರು ತರಬೇಕು. ನನ್ನ ಅವಧಿಯಲ್ಲಿ 203 ಪ್ರಶಸ್ತಿ ಇಲಾಖೆಗೆ ಬಂದಿತ್ತು. ಬಿಜೆಪಿ ಅವಧಿಯಲ್ಲಿ 50 ಪ್ರಶಸ್ತಿ ಮಾತ್ರ ಬಂದಿದೆ.
ಕಾರ್ಪೋರೇಷನ್ ನಷ್ಟದಲ್ಲಿ ಇದೆ, ಹೇಗೆ ನಡೆಸುತ್ತಾರೆ ಅಂತ ಹೇಳ್ತಾರೆ. ಪ್ರತಿ ತಿಂಗಳು ಲೆಕ್ಕ ಕೊಡ್ತೀವಿ. ಎಷ್ಟು ಜನ ಓಡಾಡುತ್ತಾರೆ ಅಂತ ಲೆಕ್ಕ ಕೊಡ್ತೀವಿ. ಮಹಿಳೆಯರ ಸಬಲೀಕರಣಕ್ಕೆ ಈ ಯೋಜನೆ ಜಾರಿ ಮಾಡಿದ್ದೇವೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.