ಸರ್ಕಾರಿ ಶಾಲೆಗೆ ಕೇಸರಿ ಬಣ್ಣ ಬಳಿಯುವ ಬಿಜೆಪಿ ಸರ್ಕಾರಕ್ಕೆ ನಾಚಿಕೆ ಆಗಬೇಕು- ಎಸ್ ಎಫ್ ಐ

ಸೋಮವಾರ, 21 ನವೆಂಬರ್ 2022 (15:46 IST)
ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ಶಿಕ್ಷಣ ಸಚಿವರ ಹೇಳಿಕೆಗೆ ವಿದ್ಯಾರ್ಥಿ ಸಂಘಟನೆಯಿಂದ ತೀವ್ರ ವಿರೋಧ ವ್ಯಕ್ತವಾಗ್ತಿದೆ.
 
ಬಿಸಿ ನಾಗೇಶ್ ಶಿಕ್ಷಣ ಸಚಿವರಾದ ನಂತರ ನಿರಂತರವಾಗಿ ಒಂದಲ್ಲ ಒಂದು ವಿವಾದ ಸೃಷ್ಟಿ ಮಾಡಿ,ಈ ರಾಜ್ಯದ ವಿದ್ಯಾರ್ಥಿಗಳನ್ನ ಶಿಕ್ಷಣವನ್ನ ದಿಕ್ಕು ತಪ್ಪಿಸುತ್ತಿದ್ದಾರೆ.ಇದನ್ನ ಇಲ್ಲಿಗೆ ನಿಲ್ಲಿಸಬೇಕು. ಕೇಸರಿ ಬಣ್ಣವನ್ನ ಶಿಕ್ಷಣ ಸಚಿವರು ಅವರ ಪಕ್ಷದ ನಾಯಕರಿಗೆ ಬಳಿದುಕೊಳ್ಳಲಿ ಶಾಲೆಗೆ ಬಳಿಯುವುದು ಬೇಡ . ಸರ್ಕಾರಿ ಶಾಲೆ ಕೇಸರಿಕರಣವಾಗಬಾರದು. ಸರ್ಕಾರಿಶಾಲೆಯ ಸಮಸ್ಯೆ ಬಗೆಹಾರಿಸೋದು ಬಿಟ್ಟು ಎಲೆಕ್ಷನ್ ಗಾಗಿ ಈ ರೀತಿ ಮಾಡಬಾರದು.ನಾಚಿಕೆ ಆಗಬೇಕು ಬಿಜೆಪಿ ಸರ್ಕಾರಕ್ಕೆ ಎಂದು ವಿದ್ಯಾರ್ಥಿ ಸಂಘಟನೆಯ ಎಸ್ ಎಫ್ ಐ ಕಾರ್ಯದರ್ಶಿ ವಾಸಿದೇವ್  ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ