ಖರ್ಗೆ ವಿರುದ್ಧ ಕೇಸ್ ಹಾಕ್ತಾರಾ ಶೋಭಾ ಕರಂದ್ಲಾಜೆ?

ಸೋಮವಾರ, 13 ಮೇ 2019 (12:39 IST)
ಹಿಂದುಳಿದ ವರ್ಗದವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲವೆಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಮುಖಂಡರು ಟೀಕೆ ಮಾಡಿದ್ದಾರೆ.

ನಮ್ಮ ದೇಶದ ಪ್ರಧಾನಿಯೇ ಹಿಂದುಳಿದ ವರ್ಗದವರು. ನೀವು ಸಿಎಂ ಆಗಿದ್ದಾಗ ಅಹಿಂದಕ್ಕೆ ಏನು ಮಾಡಿದ್ದೀರಿ? ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಬೇಕಾಗಿಲ್ಲ. ಹೀಗಂತ ಕಲಬುರಗಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ
ನೀಡಿದ್ದಾರೆ.

ಪ್ರಧಾನಿ ಮೋದಿ ದೆಹಲಿಯ ವಿಜಯ್ ಚೌಕ್‌ನಲ್ಲಿ ನೇಣು ಹಾಕಿಕೊಳ್ತಾರಾ? ಎಂದಿರುವ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭಾ, ಖರ್ಗೆಯವರು ಹತಾಶೆಯಿಂದ, ಸೋಲಿನ ಭಯದಿಂದ ಮಾತಾಡ್ತಾ ಇದ್ದಾರೆ. ವಿಜಯ್ ಚೌಕ್‌ನಲ್ಲಿ ಮೋದಿ ನೇಣು ಹಾಕಿಕೊಳ್ಳೋದಿಲ್ಲ, ಪಾರ್ಲಿಮೆಂಟ್‌ನಲ್ಲಿ ಪ್ರಮಾಣ ವಚನ ತಗೋತಾರೆ ಎಂದಿದ್ದಾರೆ.

ಮೋದಿ ಬಗ್ಗೆ ಅವಹೇಳನಕಾರಿ ಮಾತಾಡಿದ ಖರ್ಗೆ ವಿರುದ್ಧ ಪ್ರಕರಣ ದಾಖಲಿಸಬೇಕು, ಕೂಡಲೇ ಖರ್ಗೆ ಕ್ಷಮೆ ಕೋರಬೇಕು ಎಂದು ಆಗ್ರಹ ಮಾಡಿದ್ರು.

ಇನ್ನು ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದು, ಖರ್ಗೆವರು ಹತಾಶರಾಗಿ ಮೋದಿ ಬಗ್ಗೆ ಮಾತನಾಡಿದ್ದಾರೆ. 23 ರ ಫಲಿತಾಂಶದ‌ ನಂತರ ಡಬಲ್ ಡಿಜಿಟ್ ಕೂಡ ಕೈ ಪಾರ್ಟಿ ದಾಟಲ್ಲ.

ರಾಜ್ಯದಲ್ಲಿ ಕಲಬುರಗಿ, ತುಮಕೂರು, ಮಂಡ್ಯ, ಕೋಲಾರ್ ಸೇರಿದಂತೆ 22 ಸ್ಥಾನ ಗೆಲ್ಲುತ್ತೇವೆ. ಪ್ರಧಾನಿ ಬಗ್ಗೆ ಕೈ ನಾಯಕರಿಗೆ ಹಗುರವಾಗಿ ಮಾತಾಡುವ ಹವ್ಯಾಸವಿದೆ. ಕೈ ಪಾರ್ಟಿ ಜನರ ವಿಶ್ವಾಸ ಕಳೆದುಕೊಂಡು ಬೀದಿಗೆ ಬಂದಿದೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ