‘ಬೇಕಾದಂತೆ ತನಿಖೆ ನಡೆಸಲು ಸಿಎಂ, ಕೆಂಪಯ್ಯರನ್ನು ಇಟ್ಟುಕೊಂಡಿದ್ದಾರೆ’

ಸೋಮವಾರ, 27 ನವೆಂಬರ್ 2017 (12:04 IST)
ಬೆಂಗಳೂರು: ಯೋಗೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಆರೋಪಗಳು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸಿಎಂ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ವಿನಯ್ ಕುಲಕರ್ಣಿ ವಿರುದ್ಧ ರಾಜ್ಯಾದ್ಯಂತ ಚರ್ಚೆಗಳಾಗುತ್ತಿವೆ. ಹಾಗಿದ್ದರೂ ಸಿಎಂ ಸಿದ್ದರಾಮಯ್ಯ, ಗೃಹ ಇಲಾಖೆ ಸಲಹೆಗಾರ ಕೆಂಪಯ್ಯನವರನ್ನು ಹುಬ್ಬಳ್ಳಿ-ಧಾರವಾಢಕ್ಕೆ ಕಳುಹಿಸಿದ್ದು ಯಾಕೆ ಎಂದು ಸ್ಪಷ್ಟನೆ ನೀಡಬೇಕು.

ತಮ್ಮ ಮತ್ತು ಸರ್ಕಾರದ ವಿರುದ್ಧ ಏನೇ ಆರೋಪಗಳು, ಸಿಐಡಿ, ಎಸಿಬಿ ತನಿಖೆಗಳಾದರೂ ರಕ್ಷಿಸಲು ಸಿಎಂ, ಕೆಂಪಯ್ಯನವರನ್ನು ಇಟ್ಟುಕೊಂಡಿದ್ದಾರೆ ಎಂದು ಶೋಭಾ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ