ಶೋಭಕ್ಕ, ಬಿಎಸ್ವೈ ಕಾಳೆಲೆದ ಸಚಿವ ರೇವಣ್ಣ!

ಗುರುವಾರ, 17 ಜನವರಿ 2019 (17:20 IST)
ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಶೋಭಕ್ಕನನ್ನು ಮೊದಲು‌ ಚೆನ್ನಾಗಿ ‌ನೋಡಿಕೊಳ್ಳಲಿ.ಅವರಿ‌ಗೆ ಕೇಂದ್ರ ಸಚಿವೆ ಸ್ಥಾನ ನೀಡಿ‌ ಅಭಿವೃದ್ಧಿ ಮಾಡಿಸಲೀ ಎಂದು ಸಚಿವ ಹೆಚ್.ಡಿ.ರೇವಣ್ಣ ಮೂದಲಿಸಿದ್ದಾರೆ.

ಹಾಸನದಲ್ಲಿ‌ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದು, ಬಿಜೆಪಿಯವರಿಗೆ ಮಾನ,‌ ಮರ್ಯಾದೆ ಇದ್ರೆ ಬರದ ಬಗ್ಗೆ ತಲೆ ಕೆಡೆಸಿಕೊಳ್ಳಲಿ. ಶಾಸಕರನ್ನು ಹೋಟಲ್ ನಲ್ಲಿ ಕೂರಿಸಿಕೊಂಡು ಮಜಾ ಮಾಡುವುದಲ್ಲ. ಆಪರೇಷನ್ ಕಮಲ ಮಾಡಿಲ್ಲ ಎಂಬ ಯಡಿಯೂರಪ್ಪ ಹೇಳಿಕೆಗೆ ರೇವಣ್ಣ ಗರಂ ಆಗಿದ್ದು, ಚರ್ಚೆ ಮಾಡುವುದಕ್ಕೆ ಬಾಂಬೆಗ್ಯಾಕ್ರೀ ಹೋಗಬೇಕು? ಎಂದು ಪ್ರಶ್ನಿಸಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲು ಯಡಿಯೂರಪ್ಪ, ಶೋಭಕ್ಕನನ್ನು  ಚೆನ್ನಾಗಿ ‌ನೋಡಿಕೊಳ್ಳಲಿ. ಅವರಿ‌ಗೆ ಕೇಂದ್ರ ಸಚಿವೆ ಸ್ಥಾನ ನೀಡಿ‌ ಅಭಿವೃದ್ಧಿ ಮಾಡಿಸಲಿ ಎಂದು ಲೇವಡಿ ಮಾಡಿದರು.

ನಾವು ಈಗಾಗಲೇ ದೇವೇಗೌಡರೊಟ್ಟಿಗೆ ನಿಯೋಗ ತೆರಳಿ ಬರದ ಬಗ್ಗೆ ಮನವಿ ಮಾಡಿದ್ದೇವೆ ಎಂದ ಅವರು,
ಶೋಭಕ್ಕೆ ಹಾಸನದಿಂದ ಸ್ಪರ್ಧೆ ಮಾಡಿದರೂ ಒಳ್ಳೆಯದೇ ಅಲ್ವಾ?? ಎಂದು ಕೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ