ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರಿಗೆ ಇಂದು ಶಾಕಿಂಗ್ ಕಾದಿತ್ತು. ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ 22 ದೇವಾಲಯಗಳ ಸಿಬ್ಬಂದಿಯಿಂದ ಪ್ರತಿಭಟನೆ ನಡೆಯಿತು. ಆರನೇ ವೇತನ ಆಯೋಗ ಸಂಪೂರ್ಣ ಜಾರಿ ಹಾಗೂ ವಿವಿಧ ಬೇಡಿಕೆಗಾಗಿ ಒತ್ತಾಯ ಮಾಡಿದರು.
ಬೆಳ್ಳಂಬೆಳಿಗ್ಗೆ ದೇವಾಲಯದ ಮುಂದೆ ಪ್ರತಿಭಟನೆಗೆ ಪುರೋಹಿತರು, ಅರ್ಚಕರು ಹಾಗೂ ಸಿಬ್ಬಂದಿ ಕುಳಿತರು. ನಿನ್ನೆ ಡಿಸಿ ನೇತೃತ್ವದ ಅರ್ಚಕರ ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಧರಣಿ ನಡೆಸಲಾಯಿತು.
ಬೇಡಿಕೆ ಈಡೇರದ ಹೊರತು ಯಾವುದೇ ಕಾರಣಕ್ಕೂ ಮುಷ್ಕರ ಹಿಂಪಡೆಯೋಲ್ಲ ಎಂದು ಪಟ್ಟು ಹಿಡಿದರು. ಬೆಳಿಗ್ಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನೆರವೇರಿಸಿದ ಬಳಿಕ ಪ್ರತಿಭಟನೆ ಆರಂಭಗೊಂಡಿತು. ಪ್ರತಿಭಟನೆಯಿಂದಾಗಿ ಪೂಜೆ, ಹರಕೆ, ದೇವತಾ ಕಾರ್ಯಗಳಿಗೆ ತೊಡಕು ಉಂಟಾಗುವ ಸಾಧ್ಯತೆ ಇದೆ. ಭಕ್ತರು ಪರದಾಡುವಂತಾಗಿದೆ.