‘ನನ್ಮಕ್ಳು ಜೆಡಿಎಸ್ ನವರನ್ನು ಹೆದರಿಸಬೇಕು,ಅವರು ಕೌರವ ವಂಶಸ್ಥರು- ಮಾಜಿ ಶಾಸಕ ಸುರೇಶ್ ಗೌಡ
ಶುಕ್ರವಾರ, 29 ಮಾರ್ಚ್ 2019 (15:17 IST)
ತುಮಕೂರು : ಒಂದೊಂದು ವೋಟು ಕೂಡ ಇಂಪಾರ್ಟೆಂಟ್ ಕಣ್ರೋ. ಯಾವುದಕ್ಕೂ ಎದೆಗುಂದದೆ ದೊಣ್ಣೆ ಹಿಡಿದು ನಿಂತುಕೊಳ್ಳಿ. ಯಾವನ್ ಬರ್ತಾನೋ ಬರಲಿ, ಎಂದು ತುಮಕೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ನನ್ಮಕ್ಳು ಜೆಡಿಎಸ್ ನವರನ್ನು ಹೆದರಿಸಬೇಕು. ಅವರು ಮೋಸ ಮಾಡ್ತಾರೆ. ಅವರು ಕೌರವ ವಂಶಸ್ಥರು. ಅವರ ಮೇಲೆ ಯುದ್ಧ ಮಾಡಬೇಕಾದರೆ ಕೃಷ್ಣನಂತೆ ನಾನು ಇರುತ್ತೀನಿ. ನಿಂತ್ಕೊಂಡು ಯುದ್ಧ ಮಾಡಿ ಅವರನ್ನು ಸಂಹಾರ ಮಾಡೋಣ. ಅವರ ಟೆಕ್ನಿಕ್ಸ್ ನಂಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಹಾಗೇ ಗೌರಿಶಂಕರ್ ನಮ್ ದುಡ್ಡೇ ಹೊಡೀತಾನೆ. ನಮ್ ದುಡ್ಡೇ ಹಂಚ್ತಾನೆ. ಅವನೇನು ಕೋಟ್ಯದೀಶ್ವರ ಅಲ್ಲ. ಅಪ್ಪ ಪೊಲೀಸ್ ಆಗಿದ್ದವನು. ಅವನೊಬ್ಬ ದೊಡ್ಡ ಕಳ್ಳ. ಗಣಿ ಧಣಿಯ 150 ಕೇಸಲ್ಲಿ ಲೂಟಿ ಹೊಡೆದಿದ್ದಾನೆ. ಇಂತಹ ಕಳ್ಳರನ್ನು ದೇವೇಗೌಡರು ಕರೆದುಕೊಂಡು ಬಂದು ನಾಟಿ ಮಾಡುತ್ತಾರೆ. ಚೆನ್ನಾಗಿ ಇಸ್ಕೊಳ್ಳಿ. ಚೆನ್ನಾಗಿ ತಿನ್ನಿ. ಎಲ್ಲಾ ಇಸ್ಕೊಂಡು ಬಿಜೆಪಿಗೆ ವೋಟು ಹಾಕಿ. ದುಡ್ಡು ಬಂದರೆ ಚೆನ್ನಾಗ್ ಇಸ್ಕೊಂಡು ತಿನ್ರಲೇ. ಅವನು ಕ್ಯಾನ್ವಸ್ ಗೆ ಬಂದರೆ ಊರಿನ ಒಳಗಡೆ ಬಿಡಬೇಡಿ. ನೀರ್ ಬಿಡಿಸ್ದಲೇ ಇರೋ ಕಳ್ಳ ಕಳ್ಳ ಎಂದು ಕೂಗಿ ಎಂದು ಶಾಸಕ ಗೌರಿಶಂಕರ್ ವಿರುದ್ಧ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.