ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿಯೇ ಮುಂದುವರೆದಿದೆ..ಪ್ರತಿ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟಕ್ಕೆ ಬೆಳೆ ಬೆಳೆದ ರೈತರು ಕಂಗಾಲಾಗಿ ಹೋಗಿದ್ದಾರೆ..ನಿನ್ನೆ ಕೊಪ್ಪಳದಲ್ಲಿ ಸುರಿದ ಗಾಳಿ ಮಳೆಗೆ ಶೋ ರೂಮ್ ಗಾಜಿನ ಬಾಗಿಲೊಂದು ಬಿದ್ದು ಪುಡಿಪುಡಿಯಾಗಿದೆ.. ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿರುವ MRF ಟೈರ್ ಶೋ ರೂಮ್ನಲ್ಲಿ ಘಟನೆ ನಡೆದಿದೆ..ಭಾರಿ ಗಾಳಿ ಮಳೆ ಹಿನ್ನೆಲೆ ಶೋ ರೂಮ್ ಸಿಬ್ಬಂದಿ ಬಾಗಿಲು ಮುಚ್ಚಿದ್ದರು..ಆದ್ರೆ, ಬಾಗಿಲು ಹಾಕಿದ ಕೆಲವೇ ನಿಮಿಷದಲ್ಲಿ ಭಾರಿ ಗಾಳಿ ಮಳೆಗೆ ಗಾಜಿನ ಬಾಗಿಲು ಬಿದ್ದು ಪೀಸ್ ಪೀಸ್ ಆಗಿದೆ.. ಈ ದೃಶ್ಯ ಶೋ ರೂಮ್ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.