ಸಿಎಂ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ

ಮಂಗಳವಾರ, 7 ಮಾರ್ಚ್ 2023 (18:22 IST)
ಮಾಡಾಳು‌ ಮನೆಯಲ್ಲಿ 8 ಕೋಟಿ ಸಿಕ್ಕಿರುವ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮನೆಯಲ್ಲಿಯೆ ಇಷ್ಟು ಸಿಕ್ಕಿದೆ ಎಂದ ಮೇಲೆ ಇನ್ನೆಷ್ಟು ಲಂಚ ಇವರು ಹೊಡೆದಿರಬಹುದು ಎಂದು ಟೀಕಿಸಿದರು. ಚಂಚ ಪಡೆಯುವ ಮೂಲಕ ನೇರವಾಗಿ ಸಿಕ್ಕಿಬಿದ್ದಿರುವ ಮಾಡಳ್ ವಿರುದ್ದ ಯಾಕೆ ಇನ್ನು ಕ್ರಮ ಕೈಗೊಂಡಿಲ್ಲ, 40% ಕಮೀಷನ್ ಸರ್ಕಾರ ಎಂಬುದನ್ನು ಇದು ಖಚಿತ ಪಡಿಸಿದೆ. 40% ಸರ್ಕಾರ ಎಂಬುದು ಇದರಿಂದ ಪ್ರೂವ್ ಆಗಿದೆ, ಹಾಗಾಗಿ ಸಿಎಂ ಮೊದಲು ರಾಜೀನಾಮೆ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ