ಸಿದ್ದರಾಮಯ್ಯನವರಿಗೆ ಪುತ್ರನಿಂದಲೇ ಎದುರಾಯ್ತಾ ಸಂಕಷ್ಟ
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಹೈಕಮಾಂಡ್ ಯಾರ ಮೇಲೆ ಒಲವು ತೋರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಸದ್ಯಕ್ಕೆ ಸಿಎಂ ಸ್ಥಾನ ಬದಲಾವಣೆ ತಣ್ಣಗಾಗಿದ್ದರೂ ಅಧಿವೇಶನ ಮುಗಿದ ಬಳಿಕ ಮತ್ತೆ ಭುಗಿಲೇಳುವ ಸಾಧ್ಯತೆಯಿದೆ.
ಇಂತಹ ಸಂದರ್ಭದಲ್ಲಿ ಉಭಯ ನಾಯಕರ ನಡೆಯ ಮೇಲೆ ಹೈಕಮಾಂಡ್ ಹದ್ದಿನಗಣ್ಣಿರಿಸಲಿದೆ. ಯಾವುದೇ ತಪ್ಪಾದರೂ ಸಂಕಷ್ಟ ತಪ್ಪಿದ್ದಲ್ಲ. ಆದರೆ ಈಗ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿ ಡಿಕೆಶಿ ಬಣದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.