ಸಪ್ತಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಶುಕ್ರವಾರ, 23 ಡಿಸೆಂಬರ್ 2016 (12:00 IST)
ವಿಜಯಪುರ ಹೊರವಲಯದ ಐತಿಹಾಸಿಕ ಬೇಗಂ ತಲಾಬ್ ಕೆರೆ ಆವರಣದಲ್ಲಿ ಆಯೋಜಿಸಿದ ಸಪ್ತಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿದರು. ಭೂತನಾಳ್ ಹಾಗೂ ಬೇಗಂ ತಲಾಬ್ ಕೆರೆಗೆ ಗಂಗಾ ಪೂಜೆ ಸಲ್ಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗೀನ ಅಪಿ೯ಸಿದರು.
ತಲಾಬ್, ಭೂತನಾಳ, ಮಮದಾಪುರ, ತಿಡಗುಂದಿ ಸೇರಿದಂತೆ ಏಳು ಕೆರೆಗಳು ಕೃಷ್ಣಾ ಜಲಾಶಯದ ಹಿನ್ನೀರಿನಿಂದ ತುಂಬಿಸಲಾಗಿದೆ.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾದ ಎಂ ಬಿ ಪಾಟೀಲ್, ಕನಾ೯ಟಕ ಸಕಾ೯ರದ ನವ ದೆಹಲಿ ವಿಶೇಷ ಪ್ರತಿನಿಧಿ ಅಪ್ಪಾಜಿ ನಾಡಗೌಡ ಉಪಸ್ಥಿತರಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.