ಆನೆ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ನಾಯಿಗಳೆಲ್ಲ ಬೊಗಳುತ್ತಿರುತ್ತವೆ. ಹಾಗಂಥ ಆನೆ ಹಿಗ್ಗೋದೂ ಇಲ್ಲ ಕುಗ್ಗೋದು ಇಲ್ಲ. ಸಿದ್ದರಾಮಯ್ಯ ಆನೆ ಥರ. ಹೊಗಳಿಕೆಗೆ ಹಿಗ್ಗೋದೂ ಇಲ್ಲ. ಯಾರೋ ಬೈಯ್ದರೆ ಕುಗ್ಗೋದೂ ಇಲ್ಲ ಅಂತ ಕೈ ಪಡೆ ಶಾಸಕ ಹೇಳಿಕೆ ನೀಡಿದ್ದಾರೆ.
ಹೂ ಈಸ್ ಕುಪೇಂದ್ರ ರೆಡ್ಡಿ..? ಕುಪೇಂದ್ರ ರೆಡ್ಡಿ ಎಂಪಿ ಇರಬಹುದು. ಆದರೆ ಕುಪೇಂದ್ರ ರೆಡ್ಡಿ ಸಮ್ಮಿಶ್ರ ಸರ್ಕಾರ ಮಾಡಿದ್ದಾರಾ...? ರಾಹುಲ್ ಗಾಂಧಿ, ದೇವೇಗೌಡ ಸಮ್ಮಿಶ್ರ ಸರ್ಕಾರ ಮಾಡಿದ್ದಾರೆ. ಇದಕ್ಕೆಲ್ಲ ಮಾತನಾಡೋದಕ್ಕೆ ಕುಪೇಂದ್ರ ರೆಡ್ಡಿ ಯಾರು..? ಕುಪೇಂದ್ರ ರೆಡ್ಡಿಗೆ ದೇವೇಗೌಡರು ಜಿಪಿಎ ಕೊಟ್ಟಿದ್ದಾರಾ..? ದೇವೇಗೌಡರು ಮಾತನಾಡೋದನ್ನೆಲ್ಲ ಕುಪೇಂದ್ರ ರೆಡ್ಡಿ ಮಾತನಾಡ್ತಾರೆ ಅಂತ ಜಿಪಿಎ ಕೊಟ್ಟಿದ್ದಾರಾ..? ಎಂದು ಪ್ರಶ್ನೆ ಮಾಡಿದ್ರು.
ನಮ್ಮನ್ನು ಚಮಚಾಗಳು ಅನ್ನೋ ವಿಶ್ವನಾಥ್ ಮಟ್ಟದಲ್ಲಿ ನಾವಿಲ್ಲ. ಅವರು ಜೆಡಿಎಸ್ ನ ರಾಜ್ಯಾಧ್ಯಕ್ಷರು. ಅವರ ಮಟ್ಟಕ್ಕೆ ನಾವಿಲ್ಲ. ನಾವು ಸಣ್ಣಪುಟ್ಟ ಕ್ಷೇತ್ರಗಳ ಶಾಸಕರು ಅಂತ ಎಸ್. ಟಿ. ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಸೋಮಶೇಖರ್ ಯಾವಾಗ್ಲೂ ಸಾಫ್ಟ್ ಆಗಿಲ್ಲ. ನನ್ನ ಲೇವಲ್ಲಿಗೆ ತಕ್ಕಂತೆ ಮಾತಾಡ್ತಿದ್ದೇನೆ. ಸಿದ್ದರಾಮಯ್ಯ ನಮ್ಮ ನಾಯಕ, ಸಿಎಲ್ಪಿ ಲೀಡರ್ ಹೌದು. ಅವರು ಆನೆ ಇದ್ದಂಗೆ ಎಂದರು.
ಮೈತ್ರಿ ಬೇಡ ಅಂದಾದ್ರೆ ಸಿಎಂ ಕುಮಾರಸ್ವಾಮಿ ಅವ್ರು ಎರಡು ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋಗ್ತಿದ್ದಾರೆ. ಇಲ್ಲಿ ಮೈತ್ರಿ ಬೇಡ, ಚಮಚಾಗಿರಿ ಅಂತಾ ಯಾಕೆ ಹೇಳ್ತಿದ್ದಾರೆ ? ಸಿಎಂ ಅಲ್ಲಿ ಅಭ್ಯರ್ಥಿಗಳನ್ನ ಗೆಲ್ಲಿಸಬೇಕು ಅಂತಾ ಪ್ರಚಾರಕ್ಕೆ ಏಕೆ ಹೋಗ್ತಿದ್ದಾರೆ ? ಅಂತ ಕೇಳಿದ್ದಾರೆ.