ಸಿದ್ದರಾಮಯ್ಯ, ಕುಮಾರಸ್ವಾಮಿ ಲಿಂಬೆ ಹಣ್ಣು ಇಟ್ಟು ನೋಡಿ ರಾಜೀನಾಮೆ ನೀಡಲಿ
ಶನಿವಾರ, 25 ಮೇ 2019 (17:23 IST)
ಸಿದ್ದರಾಮಯ್ಯ ಗೆ ಮಾನ, ಮರ್ಯಾದೆ, ಗೌರವ ಇದ್ರೆ ರಾಜೀನಾಮೆ ಕೊಡಲಿ. ಕುಮಾರಸ್ವಾಮಿ ಗೆ ಕಿಂಚಿತ್ತು ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ. ಹೀಗಂತ ಬಿಜೆಪಿಯ ಮಾಜಿ ಡಿಸಿಎಂ ಆಗ್ರಹ ಮಾಡಿದ್ದಾರೆ.
ಮಾಜಿ ಡಿಸಿಎಂ ಆರ್.ಅಶೋಕ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಬಿಜೆಪಿ 25 ಸೀಟು ಪಡೆದಿದೆ. ಸಿದ್ದರಾಮಯ್ಯ ಗೆ ಸಮನ್ವಯತೆ ಇಲ್ಲದೆ ಸಮನ್ವಯ ಸಮಿತಿ ಅಧ್ಯಕ್ಷರಾದ್ರು. ರಾಮಕೃಷ್ಣ ಹೆಗಡೆ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಾಗ ರಾಜೀನಾಮೆ ನೀಡಿದ್ದರು.
ಇವತ್ತೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದ್ರೆ 177 ಸೀಟು ಗೆಲ್ಲುತ್ತೇವೆ. ಕಾರಣ ಲೋಕಸಭೆ ಚುನಾವಣೆಯಲ್ಲಿ 177 ವಿಧಾನಸಭೆ ಕ್ಷೇತ್ರದಲ್ಲಿ ಲೀಡ್ ಬಂದಿದೆ ಎಂದರು.
ಕಾಂಗ್ರೆಸ್ - ಜೆಡಿಎಸ್ ಮುಳುಗಿದ ಹಡಗು. ಒಂದು ವರ್ಷದ ಹಿಂದೆ ಮೈತ್ರಿ ಹಡಗು ರಮೇಶ್ ಜಾರಕಿಹೊಳಿ ಯಿಂದ ತೂತು ಬಿದ್ದಿತ್ತು. ಇವಾಗ ಮೈತ್ರಿ ಹಡಗು ಪೂರ್ತಿ ಮುಳುಗಿದೆ. ಚುನಾವಣೆ ಸಮಯದಲ್ಲಿ ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿ ನರೇಂದ್ರ ಮೋದಿ ಅವ್ರನ್ನ ತೆಗಳಿದ್ರು. ಕಳ್ಳರು, ಸುಳ್ಳರು, ಜೈಲಿಗೆ ಹೋಗಿ ಬಂದವರು ಅಂತ ಹೇಳಿದ್ರು. ಇನ್ನಾದ್ರೂ ಬಿಎಸ್ ವೈ ಅವ್ರ ಬಗ್ಗೆ ಗೌರವ ಕೊಟ್ಟು ಮಾತನಾಡಲಿ ಎಂದರು.
ಲಿಂಬೆ ಹಣ್ಣು ಇಟ್ಟು ನೋಡಿ ರಾಜೀನಾಮೆ ನೀಡಲಿ ಎಂದು ಸಚಿವ ರೇವಣ್ಣ ವಿರುದ್ಧವೋ ಪರೋಕ್ಷ ವಾಗ್ದಾಳಿ ನಡೆಸಿದರು.