24ನೇ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ
ನಾಳೆ ಎರಡನೇ ಬಾರಿಗೆ ರಾಜ್ಯದ 24ನೇ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.ಪ್ರಮಾಣವಚನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಸಿದ್ಧತೆ ಜೋರಾಗಿದ್ದು. ಈ ಹಿಂದೆ 2013ರಲ್ಲಿ ಇದೇ ಕ್ರಿಡಾಂಗಣದಲ್ಲಿ ಸಿದ್ದು ಪ್ರಮಾಣವಚನ ಸ್ವೀಕಾರ ಮಾಡಿದ್ರು. ಮತ್ತೆ ಸ್ಥಳದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಕಂಠೀರವ ಕ್ರೀಡಾಂಗಣ ಮಧ್ಯೊಳಗೆ ಬೃಹತ್ ವೇದಿಕೆ ಸಿದ್ದಪಡಿಸಲು ಅಧಿಕಾರಿಗಳು ಸಿದ್ಧತೆ ಮಾಡುತ್ತಿದ್ದಾರೆ. ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳಾದ ಎ ಎಂ ಸಲೀಂ , ಸಂದೀಪ್ ಪಾಟೀಲ್. ಅನುಚೇತ್ ಕೇಂದ್ರವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಸೇರಿದಂತೆ ಹಲವು ಅಧಿಕಾರಿಗಳು ಭದ್ರತೆ ಹಾಗೂ ಕಾರ್ಯಕ್ರಮದ ಬಂದೋಬಸ್ತ್ ಕುರಿತು ಚರ್ಚೆ ನಡೆಸುತ್ತಿದ್ದಾರೆ.