ಸಿದ್ದರಾಮಯ್ಯರ ಹೊಸ ಮನೆ ಗೃಹಪ್ರವೇಶಕ್ಕೆ ಇವರಿಗಿಲ್ಲ ಎಂಟ್ರಿ

Sampriya

ಶುಕ್ರವಾರ, 3 ಅಕ್ಟೋಬರ್ 2025 (18:01 IST)
ಮೈಸೂರು: ಡಿಸೆಂಬರ್‌ನಲ್ಲಿ ಹೊಸ ಮನೆಯ ಗೃಹ ಪ್ರವೇಶ ಮಾಡಲಿರುವ ಸಿಎಂ ಸಿದ್ದರಾಮಯ್ಯನವರು ಯಾರಿಗೂ ಆಹ್ವಾನ ನೀಡಲ್ಲ ಎಂದು ಹೇಳಿದರು. 

ಮೈಸೂರಿನಲ್ಲಿ  ಮಾಧ್ಯಮಗಳ ಜೊತೆ ಅವರು ಮಾತನಾಡಿದ ಅವರು, ಮನೆಯ ಕೆಲಸ ಬಹುತೇಕ ಮುಕ್ತಾಯವಾಗಿದೆ. ಬರೀ ಕುಟುಂಬಸ್ಥರ ಸಮ್ಮುಖದಲ್ಲಿಯೇ ಗೃಹ ಪ್ರವೇಶ ಮಾಡುತ್ತೇವೆ. 

ಸದ್ಯ ನಾನು ವಾಸವಾಗಿರುವ ಮನೆ ನನ್ನ ಸ್ವಂತದಲ್ಲ, ಮರಿಸ್ವಾಮಿ ಅವರದ್ದು.  ಮರಿಸ್ವಾಮಿಯೇ ನನಗೆ ಹಾಗೂ ನನ್ನ ಮಗನಿಗೆ ಅನ್ನದಾತ ಎಂದಿದ್ದಾರೆ. 

ಗೃಹ ಪ್ರವೇಶ ಆದ ಮೇಲೆ ಹೊಸ ಮನೆಗೆ ಹೋಗುತ್ತೇವೆ. ಈ ಮನೆಯನ್ನು ಮರಿಸ್ವಾಮಿ ಖಾಲಿ ಇಟ್ಟರೆ ಜನರನ್ನ ಭೇಟಿ ಮಾಡಲು ಬಳಸಿಕೊಳ್ಳುತ್ತೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ