ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ ಫಿಕ್ಸ್?

ಶುಕ್ರವಾರ, 31 ಮಾರ್ಚ್ 2023 (14:52 IST)
ಬೆಂಗಳೂರು : ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅಂತೆಯೇ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ವರುಣಾ ಯುದ್ಧ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
 
ಹೌದು, ವರುಣಾದಲ್ಲಿ ಸಿದ್ದರಾಮಯ್ಯಗೆ ಎದುರಾಗಿ ವಿಜಯೇಂದ್ರ ಸ್ಪರ್ಧೆ ಫಿಕ್ಸಾ ಎಂಬ ಪ್ರಶ್ನೆ ಎದ್ದಿದೆ. ಯಾಕಂದರೆ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಕಟ್ಟಿ ಹಾಕಲು ವಿಜಯೇಂದ್ರ ಸ್ಪರ್ಧೆಯ ಅಸ್ತ್ರ ಬಿಡಲು ಬಿಜೆಪಿ ಪ್ಲಾನ್ ಮಾಡಲಾಗುತ್ತಿದೆ.

2018ರಲ್ಲಿ ವರುಣಾದಲ್ಲಿ ಹೈಕಮಾಂಡ್ ಟಿಕೆಟ್ ಮಿಸ್ ಮಾಡಿತ್ತು. ಆದರೆ 2023ರಲ್ಲಿ ವಿಜಯೇಂದ್ರ ಸ್ಪರ್ಧೆಗಿಳಿಸಲು ಬಿಜೆಪಿಯೇ ಆಸಕ್ತಿ ವಹಿಸಿದಂತಿದೆ. ಈಗಾಗಲೇ ಶಿಕಾರಿಪುರ ಸ್ಪರ್ಧೆಗೆ ತಯಾರಾಗ್ತಿರೋ ವಿಜಯೇಂದ್ರಗೆ ಪಕ್ಷದಿಂದ ವರುಣಾ ಆಫರ್ ಕೊಡಲಾಗುತ್ತಿದೆ. ಗುರುವಾರ ಆರ್ ಎಸ್ಎಸ್ ಮುಖಂಡರ ಜೊತೆಗೂ ವಿಜಯೇಂದ್ರ ಸೀಕ್ರೆಟ್ ಸಮಾಲೋಚನೆ ನಡೆಸಿದ್ದಾರೆ .

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ