ಕಲಾಪ ಆರಂಭವಾದರೂ ತಾಜ್ ವೆಸ್ಟ್ ಎಂಡ್ ನಲ್ಲೇ ಉಳಿದ ಸಿಎಂ ಎಚ್ ಡಿಕೆ, ಸದನಕ್ಕೆ ಬಾರದ ಸಿದ್ದರಾಮಯ್ಯ

ಮಂಗಳವಾರ, 23 ಜುಲೈ 2019 (11:04 IST)
ಬೆಂಗಳೂರು: ಇಂದು ಮೈತ್ರಿ ಸರ್ಕಾರದ ವಿಶ್ವಾಸ ಮತ ಯಾಚನೆಗೆ ಸ್ಪೀಕರ್ ರಮೇಶ್ ಕುಮಾರ್ ಗಡುವು ವಿಧಿಸಿದ್ದು, ಸದನದ ಇಂದಿನ ಕಲಾಪ ಈಗಾಗಲೇ ಆರಂಭವಾಗಿದೆ.


ಕಲಾಪ 10 ಗಂಟೆಗೆ ಆರಂಭವಾದರೂ ಆಡಳಿತ ಪಕ್ಷದ ಘಟಾನುಘಟಿ ನಾಯಕರೇ ಇನ್ನೂ ಬಂದಿಲ್ಲ. ಅದರಲ್ಲೂ ವಿಶೇಷವಾಗಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಮುಂತಾದ ಘಟಾನುಘಟಿ ನಾಯಕರೇ ಬಂದಿಲ್ಲ. ಸಿಎಂ ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ನಲ್ಲಿ ದೇವೇಗೌಡರ ಜತೆ ಚರ್ಚೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ನಡುವೆ ಇಂದಿನ ಕಲಾಪದಲ್ಲಿ ಸಚಿವ ಯು ಟಿ ಖಾದರ್ ಮಾತು ಆರಂಭಿಸಿದ್ದಾರೆ. ನಿನ್ನೆ ಕೂಡಾ ಸಿಎಂ ಮಧ್ಯಾಹ್ನದ ನಂತರದ ಕಲಾಪಕ್ಕೆ ಹಾಜರಾಗಿರಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ