25 ವರ್ಷಗಳ ಹಿಂದೆ ಮಾಡಿದ ತಪ್ಪು ಮಾಜಿ ಸಿಎಂ ಸಿದ್ದರಾಮಯ್ಯಗೆ ಈಗ ಎದುರು ಬಂತು!
ಸೋಮವಾರ, 18 ಜೂನ್ 2018 (09:27 IST)
ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಡೆಸಿದ್ದಾರೆಂಬ 25 ವರ್ಷಗಳ ಹಿಂದಿನ ಪ್ರಕರಣವೊಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಕಂಟಕವಾಗಿ ಪರಿಣಮಿಸಿದೆ.
ಈಗ ವಿಜಯನಗರ 2 ನೇ ಹಂತದಲ್ಲಿರುವ 30 ಗುಂಟೆ ಜಮೀನನ್ನು ತಮ್ಮ ಬೆಂಬಲಿಗರಿಗೆ ಖಾತೆ ಮಾಡಿಕೊಡುವ ಮೂಲಕ ಜನರಿಗೆ ಸೇರಬೇಕಾದ ಭೂಮಿಯನ್ನು ಅಕ್ರಮವಾಗಿ ಡಿನೋಟಿ ಫೈ ಮಾಡಿ ತಮ್ಮ ಜತೆಗಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಇದೀಗ ಮೈಸೂರಿನ ವಕೀಲರೊಬ್ಬರು ಈ ಪ್ರಕರಣದ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಟ್ಟು 9 ಕ್ರಿಮಿನಲ್ ಪ್ರಕರಣಗಳು ಸಿದ್ದರಾಮಯ್ಯ ಮೇಲೆ ದಾಖಲಿಸಲು ಮೈಸೂರಿನ ಕೋರ್ಟ್ ಸೂಚಿಸಿದೆ. ಹೀಗಾಗಿ ಇದೀಗ ಭೂ ಅಕ್ರಮದ ಕಂಟಕ ಸಿದ್ದರಾಮಯ್ಯಗೆ ಉರುಳಾಗುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.