ಟಿಪ್ಪು ಒಬ್ಬ ದೇಶಪ್ರೇಮಿ ಅರಸ, ಬಿಜೆಪಿಯವರು ಕನ್ನಡ ಕಳಚಿಟ್ಟು ನೋಡಲಿ: ಸಿದ್ದರಾಮಯ್ಯ ಟಾಂಗ್

ಶನಿವಾರ, 10 ನವೆಂಬರ್ 2018 (09:27 IST)
ಬೆಂಗಳೂರು: ಇಂದು ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿಪಕ್ಷ ಬಿಜೆಪಿ ಮತ್ತು ಹಿಂದೂ ಸಂಘಟನೆಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಟಿಪ್ಪು ಸುಲ್ತಾನ್ ಸಮರ್ಥಿಸಿದ ಸಿದ್ದರಾಮಯ್ಯ, ಟಿಪ್ಪು ಒಬ್ಬ ದೇಶಪ್ರೇಮಿ ಅರಸ. ಆತನ ಕಾಲದಲ್ಲಿ ಪ್ರಜಾಪ್ರಭುತ್ವವಿರಲಿಲ್ಲ. ರಾಜಧರ್ಮಕ್ಕೆ ಅನುಸಾರವಾಗಿ ಏನು ಮಾಡಬೇಕೋ ಮಾಡಿದ್ದ. ಟಿಪ್ಪುವನ್ನು ದೇಶದ್ರೋಹಿ ಎನ್ನುವವರಾದರೆ ರಾಣಿ ಅಬ್ಬಕ್ಕ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ ಮುಂತಾದ ಹೋರಾಟಗಾರರನ್ನು ಯಾವ ಸಾಲಿಗೆ ಸೇರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

 ಅಷ್ಟೇ ಅಲ್ಲದೆ, ಬಿಜೆಪಿ ಈ ವಿಚಾರದಲ್ಲಿ ಕೋಮುವಾದದ ಕನ್ನಡ ಕಳಚಿಟ್ಟು ಸರಿಯಾಗಿ ಇತಿಹಾಸ ಓದಬೇಕು. ಆಗ ನಿಜ ಗೊತ್ತಾಗುತ್ತದೆ. ಅಷ್ಟಕ್ಕೂ ಇಂತಹ ಜಯಂತಿಗಳ ಆಚರಣೆ ಶುರು ಮಾಡಿದ್ದು ನಾವಲ್ಲ. ಇದು ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೂ ಇತ್ತು. ಈಗ ರಾಜಕೀಯ ಕಾರಣಗಳಿಗೆ ವಿನಾಕಾರಣ ವಿವಾದ ಸೃಷ್ಟಿಸಲಾಗುತ್ತಿದೆ. ಟಿಪ್ಪುವಿನ ಬಗ್ಗೆ ಮೈಸೂರು ಭಾಗದಲ್ಲಿ ಹಲವು ಲಾವಣಿ, ಜನಪದ ಹಾಡುಗಳಿವೆ. ಆತ ಜಾತ್ಯಾತೀತ, ದೇಶ ಪ್ರೇಮಿ ಎನ್ನುವುದಕ್ಕೆ ಇದೇ ಉದಾಹರಣೆ ಎಂದು ಸಿದ್ದರಾಮಯ್ಯ  ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ