ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ 8 ಸಾವಿರ ಕೋಟಿ ರೂ. ಬೃಹತ್ ಹಗರಣ ನಡೆದಿದೆ. ಇನ್ನೂ ಲೋಕಾಯುಕ್ತವನ್ನು ರದ್ದುಇ ಪಡಿಸಿ ಅವರ ಭ್ರಷ್ಟಾರವನ್ನು ಮುಚ್ಚಿಹಾಕಿದ್ದಾರೆ ಎಂದು ನಿನ್ನೇ ಸದನದಲ್ಲಿ ಸಿಎಂ ಬೊಮ್ಮಾಯಿ ಅವರು ಆರೋಪಿಸಿದ್ರು. ಈ ಹಿನ್ನೆಲೆ ಇಂದು ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದ ವಿಪಕ್ಷನಾಯಕ ಸಿದ್ದರಾಮಯ್ಯ ಕೆಲವು ವಿಚಾರ ಬಗ್ಗೆ ವಿರಾವೇಷದಿಂದ ಸಿಎಂ ಉತ್ತರ ಕೊಟ್ಟಿದ್ದಾರೆ. ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಎಸಿಬಿ ರಚನೆ ಮಾಡಿ ಲೋಕಾಯುಕ್ತ ಸಂಸ್ಥೆ ಮುಚ್ಚಿದ್ದಾರೆಂದು ಆರೋಪ ಮಾಡಿದ್ದಾರೆ. ಸಿಎಂ ಆಗಿರುವವರಿಗೆ ಕಾನೂನು ಜ್ಞಾನ ಇದೆ ಅಂದುಕೊಂಡಿದ್ದೀನಿ ದೇಶದ 16 ರಾಜ್ಯಗಳಲ್ಲಿ ಎಸಿಬಿ ಲೋಕಾಯುಕ್ತ ಎರಡು ಇದೆ. ಬಿಜೆಪಿ ಆಡಳಿತವಿರುವ ಯುಪಿಯಲ್ಲೂ ಎಸಿಬಿ ಇದೆ. ಇದನ್ನ ಅವರ ಅಡ್ವಕೇಟ್ ಜನರಲ್ ನಾವದಗಿ ಹೇಳಿದ್ದಾರೆ ಕೋರ್ಟ್ ನಲ್ಲಿ ವಾದ ಮಂಡಿಸುವಾಗ ಹೇಳಿದ್ದಾರೆ. ಸರ್ಕಾರದ ನಿಲುವುನ್ನ ಕೋರ್ಟ್ ನಲ್ಲಿ ಎಜಿ ವ್ಯಕ್ತಪಡಿಸಿದ್ದಾರೆ. 2016ರಲ್ಲಿ ನಾವು ಎಸಿಬಿ ರಚನೆ ಮಾಡಿದವು ಬೊಮ್ಮಾಯಿ ಸುಳ್ಳು ಹೇಳಿದ್ದಾರೆ. ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರ ಮುಚ್ಚಕೊಳ್ಳಲು ಎಸಿಬಿ ರಚನೆ ಅಂತಾ ಸುಳ್ಳು ಹೇಳಿದ್ದಾರೆ. 1984 ಕಾಯ್ದೆಯನ್ವಯ ಲೋಕಾಯುಕ್ತ ರಚನೆಯಾಗಿದೆ.ಆದರೆ ಭ್ರಷ್ಟಾಚಾರ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.