ಬೆಂಗಳೂರು: ಕೆಪಿಟಿಸಿಎಲ್ ವ್ಯಾಪ್ತಿಯ ವಿವಿಧ ನಿಗಮಗಳಲ್ಲಿ ಖಾಲಿಯಿರುವ 1456 ಹುದ್ದೆಗಳ ಸಹಾಯಕ ಎಂಜಿನಿಯರ್, ಕಿರಿಯ ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಸಹಾಯಕ ಕೆಲಸಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಅರ್ಹತಾ ಪರೀಕ್ಷೆ ಬರೆಯಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.
ಹೌದು, ಕೆಪಿಟಿಸಿಎಲ್ ವ್ಯಾಪ್ತಿಯ ವಿವಿಧ ನಿಗಮಗಳಲ್ಲಿ ಖಾಲಿಯಿರುವ 1456 ಹುದ್ದೆಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಅರ್ಹತಾ ಪರೀಕ್ಷೆ ಬರೆಯಲು ಸರ್ಕಾರ ಅವಕಾಶ ನೀಡಿದ್ದು, ಇದರಿಂದ ಕನ್ನಡಿಗರೇ ಇಲ್ಲಿ ಕೆಲಸ ಪಡೆಯಲು ಸಾಧ್ಯವಾಗುತ್ತದೆ.
ಇನ್ನು, ಕೆಪಿಟಿಸಿಎಲ್ ನಲ್ಲಿ ಒಟ್ಟು 1,456 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಮಾರ್ಚ್ 7 ಕಡೆಯ ದಿನವಾಗಿದ್ದು, ಕೆಇಎ ಇಲಾಖೆ ಆಯ್ಕೆ ಪರೀಕ್ಷೆ ನಡೆಸಲಿದೆ.