ಇನ್ನೂ ಕಳೆದ ನಾಲ್ಕು ತಿಂಗಳಿನಲ್ಲಿ ನಮ್ಮ ಮೆಟ್ರೊದ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು. ಜುಲೈ ತಿಂಗಳಿನಲ್ಲಿ ದೈನಂದಿನ ಸರಾಸರಿ 6.11 ಲಕ್ಷ ಮಂದಿ ನಮ್ಮ ಮೆಟ್ರೊದಲ್ಲಿ ಸಂಚರಿಸಿದ್ದಾರೆ. ಜುಲೈನಲ್ಲಿ 17 ದಿನ ಸರಾಸರಿ 6.2 ಲಕ್ಷ ಪ್ರಯಾಣಿಕರು ಮೆಟ್ರೊ ಬಳಕೆ ಮಾಡಿದ್ದು, ಈ ವರ್ಷದ ಜನವರಿಗೆ ಹೋಲಿಕೆ ಮಾಡಿದರೆ ಇದು ಶೇ 16 ರಷ್ಟು ಅಧಿಕವಾಗಿದೆ. ಏಪ್ರಿಲ್‌ನಿಂದ ಜುಲೈ ತಿಂಗಳವರೆಗೆ ಒಟ್ಟು ನಾಲ್ಕು ತಿಂಗಳು, ಪ್ರಯಾಣಿಕರ ಸಂಖ್ಯೆ ಈ ಹಿಂದಿನ ತಿಂಗಳಿಗಿಂತ ಹೆಚ್ಚಳವಾಗಿದ್ದು, ಜನರೊಂದಿಗೆ ಕೋಟಿ ಕೋಟಿ ಆದಾಯ ಕೂಡ ಹರಿದು ಬರುತ್ತಿದೆ. ಇನ್ನೂ ಆಗಸ್ಟ್ ಮಾಸಾಂತ್ಯದಲ್ಲಿ ಕೆ.ಆರ್ ಪುರ ಇಂದ ಬೈಯಪ್ಪನಹಳ್ಳಿಗೆ 2.1 ಕಿ.ಮಿ ಹಾಗೂ ಕೆಂಗೇರಿ ಇಂದ ಚಲ್ಲಘಟ್ಟದವರೆಗೆ 1.9 ಕಿ.ಮಿ ಮಾರ್ಗದ ಕಾಮಗಾರಿ ಮುಕ್ತವಾಗಲಿದ್ದು, ಮುಂದಿನ ದಿನನಗಳಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ 7.5 ಲಕ್ಷಕ್ಕೆ ಏರಿಕೆಯಾಗುವ ವಿಶ್ವಾಸ ಇದೆ ಎಂದು ಬಿಎಂಆರ್‌ಸಿಎಲ್ ಹೇಳಿಕೊಂಡಿದೆ.ಅದೇನೆ ಇರಲಿ ನಮ್ಮ ಮೆಟ್ರೋ ದತ್ತ ಜನ ಮುಖ ಮಾಡುತ್ತಿರುವುದು ಮೆಟ್ರೋಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.