ಪತ್ನಿಯನ್ನ ಕೊಲ್ಲಲು ಅಪಘಾತ ಎಸಗಿದ್ದ ಪಾಪಿ ಪತಿ ಹಾಗೂ ಮತ್ತೋರ್ವ ಆರೋಪಿಯನ್ನ ಬರೋಬ್ಬರಿ 6 ತಿಂಗಳ ಬಳಿಕ ಬಂಧಿಸುವಲ್ಲಿ ಬಾಗಲೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಅರವಿಂದ ಹಾಗೂ ಉದಯ್ ಕುಮಾರ್ ಬಂಧಿತ ಆರೋಪಿಗಳು.ಜನವರಿ ಒಂದನೇ ತಾರೀಖು ಬಾಗಲೂರಿನ ಕೆಐಡಿಬಿ ಲೇಔಟ್ ನಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಚೈತನ್ಯ ಎಂಬಾಕೆಗೆ ಅಪಘಾತವೆಸಗಿದ್ದ ಪ್ರಕರಣದ ತನಿಖೆ ಕೈಗೊಂಡ ಬಾಗಲೂರು ಪೊಲೀಸರು ಆಕೆಯ ಪತಿ ಅರವಿಂದ್ ಹಾಗೂ ಆತನ ಸಹಚರ ಉದಯ್ ಕುಮಾರ್ ನನ್ನ ಬಂಧಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ ಅರವಿಂದ ಮತ್ತು ಚೈತನ್ಯ ದಂಪತಿ ಮಧ್ಯೆ ಕಲಹ ಆರಂಭವಾಗಿತ್ತು. ತನ್ನ ತಂದೆ ತಾಯಿಯನ್ನ ಪತ್ನಿ ಚೈತನ್ಯಳೇ ತನ್ನಿಂದ ದೂರ ಮಾಡಿದಳು ಎಂದು ಅರವಿಂದ್ ಕೋಪಗೊಂಡಿದ್ದ. ಇದೇ ಕೋಪದಿಂದ ಒಂದೂವರೆ ವರ್ಷಕ್ಕೆ ವಿಚ್ಛೇದನ ಕೊಡುವಂತೆ ಪತ್ನಿಯನ್ನ ಪೀಡಿಸಲಾರಂಭಿಸಿದ್ದ. ಆದರೆ ವಿಚ್ಛೇದನ ನೀಡಲು ಚೈತನ್ಯ ಒಪ್ಪಿರಲಿಲ್ಲ. ಹಾಗಾಗಿ ಅಕೆಯನ್ನ ಕೊಲೆ ಮಾಡಲು ಅರವಿಂದ್ ನಿರ್ಧರಿಸಿದ್ದ. ಅಪಘಾತವಾದಂತೆ ಕೊಲೆ ಮಾಡಲು ಪ್ಲಾನ್ ರೂಪಿಸಿಕೊಂಡು ಅದಕ್ಕಾಗಿ ಹಳೆಯದೊಂದು ಟಾಟಾ ಸುಮೋ ಕಾರು ಖರೀದಿಸಿದ್ದ. ಬಳಿಕ ಅದಕ್ಕೆಂದೇ ಉದಯ್ ಕುಮಾರ್ ಎಂಬ ಚಾಲಕನನ್ನ ನೇಮಿಸಿಕೊಂಡಿದ್ದ. ಭರತ ನಾಟ್ಯ ಕ್ಲಾಸ್ ಮುಗಿಸಿಕೊಂಡು ಬರುವಾಗ ಟಾಟಾ ಸುಮೋದಲ್ಲಿ ಬಂದು ಅಪಘಾತ ಮಾಡಿ ಎಸ್ಕೇಪ್ ಆಗಿದ್ರು ಪ್ರಕರಣ ದಾಖಲಿಸಿಕೊಂಡ ದೇವನಹಳ್ಳಿ ಟ್ರಾಫಿಕ್ ಪೋಲಿಸರು ಬಾಗಲೂರಿಗೆ ವರ್ಗಾವಣೆ ಮಾಡಿದ್ರು. ತನಿಖೆ ಕೈಗೊಂಡ ಅದ ಅಸಲಿ ಕಹನಿ ಬೆಳಕಿಗೆ ಬಂದಿದೆ. ಆರೋಪಿಗಳು ಈಗ ಜೈಲು ಪಾಲಾಗಿದ್ದಾರೆ.