ಎಸ್ಐಟಿಯಿಂದ ಅಜ್ಞಾತ ಸ್ಥಳದಲ್ಲಿ ಕುಣಿಗಲ್ ಗಿರಿ ವಿಚಾರಣೆ

ಶನಿವಾರ, 16 ಸೆಪ್ಟಂಬರ್ 2017 (16:22 IST)
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕೆ ವ್ಯಕ್ತವಾದವರನ್ನ ಎಸ್`ಐಟಿ ಅಧಿಕಾರಿಗಳು ತನಿಖೆಗೆ ಒಳಪಡಿಸುತ್ತಿದ್ದಾರೆ. ಇವತ್ತು ರೌಡಿ ಶೀಟರ್ ಕುಣಿಗಲ್ ಗಿರಿಯನ್ನ ತನಿಖೆಗೆ ಒಳಪಡಿಸಿದ್ದಾರೆಂದು ವರದಿಯಾಗಿದೆ.

ಗೌರಿ ಲಂಕೇಶ್ ಹತ್ಯೆಯಾದ ದಿನ ಕುಣಿಗಲ್ ಗಿರಿ ರಾಮನಗರ ಜೈಲಿನಲ್ಲಿದ್ದರು. ನಿನ್ನೆ ಬಿಡುಗಡೆಯಾಗಿದ್ದಾರೆ. ಆದರೆ, ಕುಣಿಗಲ್ ಗಿರಿ ಸಹಚರರ ಮೇಲಿನ ಶಂಕೆ ಹಿನ್ನೆಲೆಯಲ್ಲಿ ಎಸ್`ಐಟಿ ಕುಣಿಗಲ್ ಗಿರಿ ಕುರಿತಂತೆ ಮಾಹಿತಿ ಸಂಗ್ರಹಕ್ಕೆ ಮುಂದಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದದನ್ನ ಗಮನಿಸಿದ ಕುಣಿಗಲ್ ಗಿರಿ ನಿನ್ನೆ ಸ್ವಯಂಪ್ರೇರಿತರಾಗಿ ಸಿಐಡಿ ಕಚೇರಿ ಆವರಣದಲ್ಲಿರುವ ಎಸ್ಯಟಿ ಕಚೇರಿಗೆ ಪೋಷಕರ ಸಮೇತರಾಗಿ ಭೇಟಿ ನೀಡಿದ್ದರು. ಆದರೆ, ನಿನ್ನೆ ಅಧಿಕಾರಿಗಳ ಭೇಟಿ ಸಾಧ್ಯವಾಗಿರಲಿಲ್ಲ. ಹೀಗಾಗಿ, ಇವತ್ತು ಕುಣಿಗಲ್ ಗಿರಿಯನ್ನ ಕರೆಸಿಕೊಂಡಿರುವ ಎಸ್ಐಟಿ ತಂಡ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದೆ ಎಂದು ವರದಿಯಾಗಿದೆ.

ನಿನ್ನೆ ಎಸ್`ಐಟಿ ಕಚೇರಿಗೆ ಬಂದಿದ್ದ ಕುಣಿಗಲ್ ಗಿರಿ ಪ್ರಕರಣದಲ್ಲಿ ನನ್ನ ಕೈವಾಡವಿಲ್ಲ. ಮಾಧ್ಯಮಗಳಲ್ಲಿ ವರದಿ ನೋಡಿ ನನ್ನ ಪೋಷಕರು ಆತಂಕಗೊಂಡಿದ್ದರು. ಹೀಗಾಗಿ, ಸ್ಪಷ್ಟನೆ ನೀಡಲು ಇಲ್ಲಿಗೆ ಬಂದಿದ್ದೇನೆ. ಇವತ್ತು ತಾನೇ ಜೈಲಿನಿಂದ ರಿಲೀಸ್ ಆಗಿದ್ದು, 7-8 ವರ್ಷಗಳ ಬಳಿಕ ಊರಿಗೆ ತೆರಳುತ್ತಿದ್ದೇನೆ. ಕೃಷಿ ಮಾಡಿಕೊಂಡು ಬದುಕುತ್ತೇನೆಂದು ಹೇಳಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ