ಬೆಂಗಳೂರು: ನಿನ್ನೆ ಇಹಲೋಕ ತ್ಯಜಿಸಿದ್ದ ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಎಸ್ ಎಲ್ ಭೈರಪ್ಪನವರ ಅಂತಿಮ ಸಂಸ್ಕಾರ ಇಂದು ಸಕಲ ಸರ್ಕಾರೀ ಗೌರವಗಳೊಂದಿಗೆ ನಡೆಯಲಿದೆ. ಅವರ ಅಂತ್ಯಸಂಸ್ಕಾರ ಕುರಿತ ಮಾಹಿತಿ ಇಲ್ಲಿದೆ.
ನಿನ್ನೆ ಮಧ್ಯಾಹ್ನ 2.38 ರ ವೇಳೆಗೆ ಎಸ್ ಎಲ್ ಭೈರಪ್ಪನವರು ಸಾವನ್ನಪ್ಪಿದ್ದರು. ಅವರ ನಿಧನಕ್ಕೆ ಪ್ರಧಾನಿ ಮೋದಿ, ಸಾಹಿತ್ಯ ಲೋಕದ ಗಣ್ಯರು, ಅಭಿಮಾನಿಗಳು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನದ ಬಳಿಕ ಮೃತದೇಹವನ್ನು ಮೈಸೂರಿಗೆ ಕರೆದೊಯ್ಯಲಾಗುತ್ತದೆ. ಮಧ್ಯಾಹ್ನದವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅದಾದ ಬಳಿಮ ಮೃತದೇಹವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಮೈಸೂರಿನ ಕಲಾಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅದಾದ ಬಳಿಕ ನಾಳೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಭೈರಪ್ಪನವರು ಬ್ರಾಹ್ಮಣ ಸಮುದಾಯದವರು. ಹೀಗಾಗಿ ಅವರ ಅಂತಿಮ ಕ್ರಿಯೆಗಳು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಲಿದೆ. ಅವರ ಪುತ್ರರು ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಇದಕ್ಕೆ ಮೊದಲು ಅವರಿಗೆ ಸರ್ಕಾರೀ ಗೌರವ ನೀಡಲಾಗುತ್ತದೆ.