ಆನೆ ಕಂಡಂದ್ದೇ ತಡ ಖುಷಿಗೊಂಡ ಕಾಡಿನ ಮಕ್ಕಳು ಆನೆಯೊಟ್ಟಿಗೆ ಆಡಿ ನಲಿದಾಡಿದ್ದಾರೆ. ಮನುಷ್ಯರನ್ನೇ ಕಾಣದ ಮರಿ ಆನೆ ಹೊಸ ಸ್ನೇಹಿತರೊಟ್ಟಿಗೆ ನಲಿದಿದ್ದು, ಮಕ್ಕಳು ಕೊಟ್ಟ ಹಾಲನ್ನು ಕುಡಿದು ಅವರೊಂದಿಗೆ ಆಟ ಆಡಿಗೆ. ಬಾಳೆಹಣ್ಣು ತಿನ್ನಿಸಿ 'ಆನೆ ಬಂತೊಂದಾನೆ, ಯಾವೂರ ಆನೆ' ಎಂದು ಹಾಡಿ ಮಕ್ಕಳು ಕುಣಿದು ಕುಪ್ಪಳಿಸಿರುವುದು ವೀಡಿಯೋದಲ್ಲಿ ಸೆರೆ ಆಗಿದೆ.
ಯಳಂದೂರು ತಾಲೂಕಿನ ಬುಡಕಟ್ಟು ಜನಾಂಗದವರ ವ್ಯಾಪ್ತಿಯ ಗ್ರಾಮವೊಂದರ ಶಾಲಾ ಪ್ರದೇಶದಲ್ಲಿ ಈ ಆನೆಯ ಮರಿ ಓಡಾಡುತ್ತಿರುವುದು ಪತ್ತೆ ಆಗಿತ್ತು. ಇದರೊಂದಿಗೆ ಮಕ್ಕಳು ಮತ್ತು ವಯಸ್ಕರು ಆಟವಾಡುತ್ತಾ ಅದಕ್ಕೆ ತಿಂಡಿ ತಿನಿಸುಗಳನ್ನು ತಿನ್ನಿಸುತ್ತಿರುವ ದೃಶ್ಯ ಕಂಡುಬಂದಿದೆ. ಇದಕ್ಕೆ ಬಾಳೆಹಣ್ಣು ಮತ್ತು ಇತರ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಆನೆ ಮರಿ ತುಂಬಾ ಸಂತೋಷವಾಗಿದ್ದರೂ, ಅಂತಹ ಸಾಮೀಪ್ಯ ಅಪರೂಪ ಎಂದು ಚಾಮರಾಜನಗರದ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದರು. ತನ್ನ ತಾಯಿ ಆನೆಯೊಂದಿಗೆ ಸೇರಿಸಲು ಪ್ರಯತ್ನಿಸುತ್ತಿರುವ ಅರಣ್ಯಾಧಿಕಾರಿಗಳು ಆನೆಯ ಮರಿಯನ್ನು ಕರೆದೊಯ್ದಿದ್ದಾರೆ.