ಕಳ್ಳತನ ಮಾಡದಂತೆ ಬುದ್ಧಿ ಹೇಳಿದ್ದಕ್ಕೆ ತಂದೆಯನ್ನು ಕೊಂದ ಮಗ
70 ವರ್ಷದ ತಂದೆಯನ್ನು ಮಗ ಜಾಡಿಸಿ ಒದ್ದು ಕೊಲೆ ಮಾಡಿದ್ದಾನೆ, ಮಗ ಕಳ್ಳತನ ಮಾಡುತ್ತಿದ್ದಲ್ಲದೆ, ಮದ್ಯವ್ಯಸನಿಯಾಗಿದ್ದ. ಈಗಾಗಲೇ ಈತನ ವಿರುದ್ಧ ಹಲವು ಪೊಲೀಸ್ ಕೇಸ್ ಗಳಿವೆ. ಹಲವು ಬಾರಿ ತಂದೆ ಮಗನನ್ನು ಬಿಡಿಸಿಕೊಂಡು ಬಂದಿದ್ದಾರೆ.
ಬೇಸತ್ತ ತಂದೆ ಮಗನಿಗೆ ಬುದ್ಧಿ ಹೇಳಿದ್ದು, ಮನೆಯಲ್ಲಿ ಕೂಡಿ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಕೋಪದಿಂದ ಮಗ ಒದ್ದ ರಭಸಕ್ಕೆ ತಂದೆ ಸಾವನ್ನಪ್ಪಿದ್ದಾರೆ. ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ.