ಪುತ್ರ ವ್ಯಾಮೋಹ: ಹೆಣ್ಣು ಮಗು ಮಾರಾಟಕ್ಕೆ ಯತ್ನಿಸಿದ ದಂಪತಿ

ಮಂಗಳವಾರ, 2 ಆಗಸ್ಟ್ 2016 (10:41 IST)
ಗಂಡು ಮಗುವಿನ ಮೇಲೆ ವ್ಯಾಮೋಹ ಹೊಂದಿದ್ದ ದಂಪತಿ ತಮ್ಮ 8ನೇ ಹೆಣ್ಣು ಮಗುವನ್ನು ಮಾರಾಟಕ್ಕೆ ಯತ್ನಿಸಿದ ಹೇಯ ಕೃತ್ಯ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೆಂಪಸಂದ್ರದಲ್ಲಿ ನಡೆದಿದೆ.
 
ಪುತ್ರ ವ್ಯಾಮೋಹ ಹೊಂದಿದ್ದ ಕೃಷ್ಣಪ್ಪ ಹಾಗೂ ಪಾರ್ವತಿ ದಂಪತಿಗೆ ನಿರಂತರವಾಗಿ ಹೆಣ್ಣು ಮಕ್ಕಳು ಜನಸಿದ್ದವು. ಬಡತನದಲ್ಲಿ ಈ ಮಕ್ಕಳನ್ನು ಪೋಷಣೆ ಮಾಡಲು ಸಾಧ್ಯವಾಗದು ಎಂದು ಯೋಚಿಸಿ. ತಮ್ಮ 8 ನೇಯ ಹೆಣ್ಣು ಮಗುವನ್ನು ಮಾರಾಟಕ್ಕೆ ಹತ್ನಿಸಿದ್ದರು ಎಂದು ಹೇಳಲಾಗುತ್ತಿದೆ.
 
ಖಚಿತ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ಹೆಣ್ಣು ಮಗುವನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಿದ್ದಾರೆ. ಈಗ ಮಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿ ರಕ್ಷಣೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ