ಎಸ್.ಪಿ.ಬಿ ನಿಧನಕ್ಕೆ ಕೃಷಿ ಸಚಿವ ಸಂತಾಪ

ಶುಕ್ರವಾರ, 25 ಸೆಪ್ಟಂಬರ್ 2020 (20:22 IST)
ಗಾನ ಗಂಧರ್ವ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಕೃಷಿ ಸಚಿವ ಬಿ. ಸಿ. ಪಾಟೀಲ ಸಂತಾಪ ಸೂಚಿಸಿದ್ದಾರೆ.

ಟ್ವಿಟ್ ಮಾಡಿರುವ ಸಚಿವ ಬಿ.ಸಿ.ಪಾಟೀಲ್, ಭಾರತೀಯ ಚಿತ್ರರಂಗದ ಅದೆಷ್ಟೋ ನಟರ ಅಭಿನಯದಲ್ಲಿ ತಮ್ಮ ಧ್ವನಿಯ ಮೂಲಕ ಬೆರೆತಿದ್ದ ಅಪರೂಪದ ಕಲಾವಿದ, ಗಾನ ಗಂಧರ್ವ ಶ್ರೀ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿರುವ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ.

ಅವರ ಸಾಧನೆಗಳು ಅಪೂರ್ವ ಮತ್ತು ಅವರ್ಣನೀಯ. ದೇಶ ಕಂಡ ಶ್ರೇಷ್ಠ ಸಂಗೀತ ದಿಗ್ಗಜನಿಗೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಸ್ಥರು, ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಅವರು ಸಂತಾಪ ಸೂಚಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ