ಮೈಸೂರು-ಮಧುರೈ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚಾರ

geetha

ಗುರುವಾರ, 7 ಮಾರ್ಚ್ 2024 (14:00 IST)
ಬೆಂಗಳೂರು-ನೈರುತ್ಯ ರೈಲ್ವೆಯಿಂದ ಮಾಹಿತಿ ನೀಡಲಾಗಿದ್ದು, ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು, ಪ್ರಯಾಣಿಕರ ಬೇಡಿಕೆಯ ಮೇರೆಗೆ ಮೈಸೂರು ಮತ್ತು ತಮಿಳುನಾಡಿನ ಮನಮಧುರೈ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ ಎಂದಿದೆ.
 
ಈ ವಿಶೇಷ ರೈಲು (06237) ಮಾರ್ಚ್ 11, 2024 ರಂದು ಮೈಸೂರು ನಿಲ್ದಾಣದಿಂದ ಸಂಜೆ 06:35 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 09:10 ಗಂಟೆಗೆ ತಮಿಳುನಾಡಿನ ಮನಮದುರೈ ನಿಲ್ದಾಣವನ್ನು ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ಇದೇ ರೈಲು (06238) ಮಾರ್ಚ್ 12, 2024 ರಂದು ಮಧ್ಯಾಹ್ನ 12 ಗಂಟೆಗೆ ಮನಮಧುರೈ ನಿಲ್ದಾಣದಿಂದ ಹೊರಟು ಮರುದಿನ ಬುಧವಾರ ರಾತ್ರಿ 01:55 ಗಂಟೆಗೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.
 
ವಿಶೇಷ ರೈಲಿನಲ್ಲಿ ಎರಡನೇಯ ಹವಾನಿಯಂತ್ರಿತ ದರ್ಜೆ-2, ಮೂರನೇಯ ಹವಾನಿಯಂತ್ರಿತ ದರ್ಜೆ-6, ಸ್ಲೀಪರ್ ಕ್ಲಾಸ್ ಬೋಗಿಗಳು-9, ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು-2 ಮತ್ತು ಬ್ರೇಕ್ ವ್ಯಾನ್ ಕಮ್ ಜನರೇಟರ್ ಕಾರು-2 ಸೇರಿದಂತೆ ಒಟ್ಟು 21 ಬೋಗಿಗಳು ಒಳಗೊಂಡಿರುತ್ತವೆ.ಇನ್ಮುಂದೆ ಮೈಸೂರು-ಮನಮಧುರೈ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ ಈ ಮೂಲಕ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ