ಕೊರೊನಾ ತಡೆಗೆ ಹೊಸ ಟೆಕ್ನಿಕ್ : ಮೈಮೇಲೆ ಸ್ಪ್ರೇ ಮಾಡೋದು

ಸೋಮವಾರ, 6 ಏಪ್ರಿಲ್ 2020 (19:55 IST)
ಕೊರೊನಾ ವೈರಸ್ ತಡೆಗೆ ಇದೀಗ ಸಿಬ್ಬಂದಿ ಮೈಮೇಲೆ ಸ್ಪ್ರೇ ಸಿಂಪಡಣೆ ಮಾಡಲಾಗುತ್ತಿದೆ.

ಕೊರೊನಾ ವೈರಸ್ ತಡೆಗೆ ವ್ಯಾಪಕ ಕ್ರಮಕೈಗೊಳ್ಳುತ್ತಿರುವ ಕಲಬುರಗಿಯಲ್ಲಿ, ಇದೀಗ ಕಲಬುರಗಿ ಮಹಾನಗರ ಪಾಲಿಕೆ ತನ್ನ ಪೌರ ಕಾರ್ಮಿಕರ ಸುರಕ್ಷತೆಗೆ ಹೊಸ ಹೆಜ್ಜೆಇಟ್ಟಿದೆ. ಟೌನ್ ಹಾಲ್ ಬಳಿ ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಿಬ್ಬಂದಿಗಳ ಮೇಲೆ ಸೋಡಿಯಂ ಹೈಪೋ ಕ್ಲೋರೈಡ್ ದ್ರಾವಣ ಸ್ಪ್ರೇ ಮಾಡುತ್ತಿದೆ.

 ಟನೆಲ್ ನಿರ್ಮಿಸಿ, ಸ್ಪ್ರಿಂಕ್ಲರ್ ಜೆಟ್ ಗಳ ಮೂಲಕ ಈ ದ್ರಾವಣ ಸಿಂಪಡಿಸಲಾಗುತ್ತದೆ ಎಂದು ಮಹಾನಗರಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.

500 ಲೀಟರ್ ನೀರಿಗೆ 0.1% ಸೋಡಿಯಂ ಹೈಪೋ ಕ್ಲೋರೈಡ್  ಮಿಶ್ರಣ ಮಾಡಿ, 10ಹೆಚ್ ಪಿ ವಿದ್ಯುತ್ ಮೋಟಾರು ಬಳಸಿ ಸ್ಪ್ರೇ ಮಾಡಲಾಗುತ್ತದೆ. ನಿತ್ಯ ಸ್ವಚ್ಛತೆ ಬಳಿಕ ಕಾರ್ಮಿಕರು ಟನೆಲ್ ನಲ್ಲಿ ಹಾದುಹೋಗಿ ಸ್ಪ್ರೇ ಮಾಡಿಕೊಳ್ಳುವ ಮೂಲಕ ಕೊರೋನಾ ವೈರಾಣು ಸೇರಿದಂತೆ ಎಲ್ಲಾ ವೈರಸ್ ಗಳಿಂದ ರಕ್ಷಿಸಿಕೊಳ್ಳಬಹುದೆಂದು ಅವರು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ